ಮೈಸೂರು

ಮೈಸೂರು ಅರಮನೆಯಲ್ಲಿ ಶೀಘ್ರದಲ್ಲಿ ವೈಫೈ ಸೇವೆ

ಮೈಸೂರಿನ ಅರಮನೆಯಲ್ಲೂ ವೈಫೈ ಸೇವೆ ಒದಗಿಸಲು ಬಿಎಸ್‍ಎನ್‍ಎಲ್‍ ಮುಂದಾಗಿದೆ. ಮೃಗಾಲಯ, ನ್ಯಾಯಾಲಯ ಆವರಣದಲ್ಲಿ ಬಿಎಸ್‍ಎನ್‍ಎಲ್‍ ಈಗಾಗಲೇ ವೈಫೈ ಸೇವೆ ಒದಗಿಸುತ್ತಿದೆ.

ಗುರುವಾರದಂದು ನಗರದ ನ್ಯೂ ಸಯ್ಯಾಜಿ ರಾವ್ ರಸ್ತೆಯ ಬಿಎಸ್‍ಎನ್‍ಎಲ್‍ ಜಿಲ್ಲಾ ಕಚೇರಿ ಆವರಣದಲ್ಲಿ ಬಿಎಸ್‍ಎನ್‍ಎಲ್‍ ರಥಕ್ಕೆ ಬಿಎಸ್‍ಎನ್‍ಎಲ್‍ ಪ್ರಧಾನ ವ್ಯವಸ್ಥಾಪಕ ಕೆ.ಎಲ್. ಜೈರಾಮ್ ಚಾಲನೆ ನೀಡಿ ಮಾತನಾಡಿದರು.

ಅರಮನೆ ಸುತ್ತಮುತ್ತ 7 ಕಡೆ ವೈಫೈ ಅಳವಡಿಸಲು ಸಿದ್ಧತೆ ಮಾಡಲಾಗುತ್ತಿದೆ. ಅರಮನೆಗೆ ಭೇಟಿ ನೀಡುವ ಪ್ರವಾಸಿಗರು ಅರಮನೆ ವೀಕ್ಷಿಸುವ ಜತೆಗೆ ವೈಫೈ ಸೌಲಭ್ಯ ಕೂಡ ಪಡೆಯಬಹುದೆಂದು ಹೇಳಿದರು.

Leave a Reply

comments

Related Articles

error: