ಮೈಸೂರು

ಹಣ ಕೊಡಿಸಿದಾತನಿಗೇ ಹಣ ಪಡೆದ ವ್ಯಕ್ತಿಗಳಿಂದ ಹಲ್ಲೆ

ಮೈಸೂರು,ಮಾ.2:- ಯಾರಿಗೋ ಹಣ ತೆಗೆಸಿಕೊಡಲು ಮಧ್ಯಸ್ಥಿಕೆ ವಹಿಸಿದ ವ್ಯಕ್ತಿಯೋರ್ವ ಹಣ ಪಡೆದವರು ಹಣ ವಾಪಸ್ ನೀಡದೇ ಅವರ ಬಳಿ ತೆರಳಿ ಕೇಳಿದಾಗ ಹಣ ತೆಗೆಸಿಕೊಡಲು ಕಾರಣನಾದ ವ್ಯಕ್ತಿಗೇ ಥಳಿಸಿ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.

ಮೈಸೂರಿನ ಎನ್ ಆರ್.ಮೊಹಲ್ಲಾ ನಿವಾಸಿ ಮದನ್ ಎಂಬಾತ ಬೃಂದಾವನ ಬಡಾವಣೆಯ ಕಾರ್ತೀಕ ಮತ್ತು ರತನ್ ಎಂಬವರಿಗೆ ಮಧ್ಯಸ್ಥಿಕೆ ವಹಿಸಿ ತನಗೆ ಪರಿಚಯವಿರುವ ವ್ಯಕ್ತಿಯೋರ್ವರಿಂದ ಹಣ ತೆಗೆಸಿಕೊಟ್ಟಿದ್ದ. ಆದರೆ ಹಣ ಪಡೆದ ವ್ಯಕ್ತಿಗಳು ಹಣ ನೀಡಿರಲಿಲ್ಲ. ಹಣ ನೀಡಿಲ್ಲ ಎಂದು ಹಣ ನೀಡಿದ ವ್ಯಕ್ತಿ ಮದನ್ ಬಳಿ ದೂರಿದ್ದರು. ಅದಕ್ಕಾಗಿ ಮದನ್ ಕಾರ್ತೀಕ್ ಮತ್ತು ರತನ್ ಬಳಿ ಹಣ ವಾಪಸ್ ಕೇಳಿದಾಗ ಅವರು ತಮ್ಮ ಸ್ನೇಹಿತರಾದ ಸಾಗರ್, ರೋಹಿತ್, ವೀರು ಜೊತೆ ಸೇರಿ ಮದನ್ ಮೇಲೇಯೇ ಹಲ್ಲೆ ನಡೆಸಿ ಗಾಯಗೊಳಿಸಿ ಅವನ ಕತ್ತಿನಲ್ಲಿದ್ದ 20ಗ್ರಾಂ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ. ಈ ಕುರಿತು ಲಷ್ಕರ್ ಠಾಣೆಯಲ್ಲಿ ಮದನ್ ದೂರು ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: