ಮೈಸೂರು

ಗುರುಕಾರ್ ಪುರ : ಬೋನಿಗೆ ಬಿದ್ದ ಚಿರತೆ

ಹಸುವಿನ ಮೇಲೆ ದಾಳಿ ನಡೆಸಲು ಬಂದ ಚಿರತೆಯೊಂದು ತಾನೇ ಬೋನಿಗೆ ಬಿದ್ದು ಸೆರೆಯಾದ ಘಟನೆ ನಡೆದಿದೆ.

ಮೈಸೂರು ಸಮೀಪದ ಮೇಗಳಾಪುರ ಬಳಿಯ ಗುರುಕಾರ್ ಪುರದಲ್ಲಿ ಚಿರತೆಯೊಂದು ಹಸು ಹಾಗೂ ಟಗರನ್ನು ತಿನ್ನಲು ಆಗಮಿಸಿತ್ತು. ಇದೀಗ ತಾನೇ ಬೋನಿಗೆ ಬಿದ್ದಿದೆ.

ಹಸುವಿನ ಮೇಲೆ ದಾಳಿ ನಡೆಸಲು ಹೊಂಚು ಹಾಕಿದ ಚಿರತೆ ಕೊಟ್ಟಿಗೆಯೊಳಗ್ಗೆ ನುಗ್ಗಿತ್ತು. ಆದರೆ ಕೊಟ್ಟಿಗೆಯಲ್ಲಿ ಹಸುಗಳಿರಲಿಲ್ಲ. ಅಲ್ಲಿದ್ದ ಟಗರಿನ ಮೇಲೆ ದಾಳಿ ನಡೆಸಿದೆ. ಟಗರು ಚಿರತೆಯಿಂದ ಹೇಗೋ ತಪ್ಪಿಸಿಕೊಂಡಿದೆ. ಇದನ್ನು ತಿಳಿದ ಗ್ರಾಮಸ್ಥರು ಮೇಗಳಾಪುರ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ರಾತ್ರಿಯ ವೇಳೆ ಕಾರ್ಯಾಚರಣೆ ನಡೆಸುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಗುರುವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಕೊಟ್ಟಿಗೆಯ ಬಾಗಿಲಿಗೆ ಬೋನನ್ನು ಇರಿಸಿದ್ದು, ಗುಂಡು ಹಾರಿಸುವ ಮೂಲಕ ಚಿರತೆಯನ್ನು ಬೆದರಿಸಿದ್ದಾರೆ. ಗುಂಡಿನ ಸದ್ದಿಗೆ ಬೆದರಿದ ಚಿರತೆ ಬೋನಿನೊಳಗೆ ಬಿದ್ದಿದೆ. ಬೋನಿನಲ್ಲಿ ಬಿದ್ದ ಚಿರತೆಯನ್ನು ಮೂಲೆಹೊಳೆ ಕಾಡಿಗೆ ಕೊಂಡೊಯ್ದು ಬಿಡಲಾಗಿದೆ.

ಇತ್ತೀಚೆಗೆ ಮೈಸೂರು ಜಿಲ್ಲೆಯಲ್ಲಿ ಚಿರತೆಯ ಹಾವಳಿ ಹೆಚ್ಚುತ್ತಿದ್ದು ಜನತೆ ಕಂಗಾಲಾಗಿದ್ದಾರೆ.

Leave a Reply

comments

Related Articles

error: