
ಚೆನ್ನೈ,ಮಾ.02: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಕಾಲಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಫೆ.28ರಂದೆ ಶುರುವಾಗಬೇಕಿದ್ದ ಕಾಲಾನ ಹವಾ ಕಂಚಿಮಠದ ಶ್ರೀಗಳಾದ ಜಯೇಂದ್ರ ಸರಸ್ವತಿ ಅವರು ಸಾವಿನ ಹಿನ್ನೆಲೆ ಟೀಸರ್ ಬಿಡುಗಡೆಯನ್ನು ಚಿತ್ರತಂಡ ಮಾ.2ಕ್ಕೆ ಮುಂದಕ್ಕೆ ಹಾಕಿತ್ತು. ರಜನಿಕಾಂತ್ ಆಳಿಯ ಧನುಷ್ ಅವರೂ ಕೂಡ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಅಂತೆಯೇ ಇಂದು ಟೀಸರ್ ಬಿಡುಗಡೆ ಯಾಗಿದ್ದು, ಕಬಾಲಿ ಚಿತ್ರದ ಶೈಲಿಯಲ್ಲೇ ಕಾಲಾ ಕೂಡ ದಕ್ಷಿಣ ಭಾರತ ಸಿನಿರಂಗದಲ್ಲಿ ಹೊಸ ಹವಾ ಸೃಷ್ಟಿಸಿದೆ.
Here you go !! Kaala teaser. https://t.co/W7rmWtiMsA thalaivar teaser eppo release aanaalum eppidi release aanaalum diwali dhaan. Mass dhaan.
— Dhanush (@dhanushkraja) March 1, 2018
ಯೂಟ್ಯೂಬ್ ನಲ್ಲಿ ಇಂದು ಕಾಲಾ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ರಜನಿಕಾಂತ್ ಅಳಿಯ ಧನುಷ್ ಅವರ ವುಂಡರ್ಬಾರ್ ಫಿಲ್ಮ್ನಡಿ ಈ ಚಿತ್ರ ನಿರ್ಮಾಣವಾಗಿರುವ ಚಿತ್ರದ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬರೊಬ್ಬರಿ 21 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಚಿತ್ರದ ನಾಯಕ ರಜನಿ ಕಾಂತ್ ಬ್ಲಾಕ್ ಆಯಂಡ್ ಬ್ಲಾಕ್ ಡ್ರೆಸ್ನಲ್ಲಿ ಮಿಂಚಿದ್ದು ಅಭಿಮಾನಿಗಳಿಗೆ ಥ್ರಿಲ್ ಕೊಡುವಂತ ಡೈಲಾಗ್ ಇದೆ. ನಾನಾ ಪಾಟೇಕರ್ ವಿಲನ್ ರೋಲ್ನಲ್ಲಿ ಕಾಣಿಸಿಕೊಂಡಿದ್ದು, ಕಬಾಲಿ ನಿದೇರ್ಶಕ ಪ.ರಂಜಿತ್ ಕಾಲಾ ಚಿತ್ರಕ್ಕೂ ಆಯಕ್ಷನ್ ಕಟ್ ಹೇಳಿದ್ದಾರೆ. (ವರದಿ: ಪಿ.ಎಸ್ )