ಮೈಸೂರು

‘ಅರುಂಧತಿ ಆಲಾಪ’ ನಾಟಕ ಪ್ರದರ್ಶನ ನ.27ರಂದು

ರಂಗಾಯಣದ ಕಲಾವಿದರಾದ ಎಸ್. ರಾಮನಾಥರವರು ರಚಿಸಿ, ಕೊಡಗಿನ ರಂಗಭೂಮಿ ಪ್ರತಿಷ್ಠಾನ (ರಿ) ದ ಅಡ್ಡಂಡ ಕಾರ್ಯಪ್ಪ ನಿರ್ದೇಶಿಸಿರುವ ‘ಅರುಂಧತಿ ಆಲಾಪ’ ನಾಟಕದ ಪ್ರಥಮ ಪ್ರದರ್ಶನ ನ.27 ರಂದು ಸಂಜೆ 6.30ಕ್ಕೆ ಮೈಸೂರಿನ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ  ನಡೆಯಲಿದೆ.

ವೀರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿ ಕಲಾವಿದರ ಸಹಕಾರದೊಂದಿಗೆ ರೂಪಗೊಂಡಿರುವ ಈ ನಾಟಕದ ರಂಗಸಜ್ಜಿಕೆ -ಶಶಿಧರ ಅಡಪ. ಸಂಗೀತ – ಕಿಶೋರ್ ಮೈಸೂರು, ಬೆಳಕು – ಜೀವನ್ ಕುಮಾರ್ ಹೆಗ್ಗೋಡು, ವಸ್ತ್ರ ವಿನ್ಯಾಸ – ಪ್ರಮೀಳಾ ಬೇಂಗ್ರೆ ಮತ್ತು ಅನಿತಾ ಕಾರ್ಯಪ್ಪ, ಸಂಯೋಜಕಿ ರೇವತಿ ಮಧೋಶ್ ಇದ್ದಾರೆ.

‘ಅರುಂಧತಿ ಆಲಾಪ’ ವಾಸ್ತವದ ನೆಲಗಟ್ಟಿನ ಸರಳ ನೇರ ಕಥೆಯಾದರೂ ನಾಟಕವಾಗಿ ರೂಪಗೊಳ್ಳುವಲ್ಲಿ ಬದುಕಿನ ಎಲ್ಲ ಸಂರ್ಕೀಣತೆಗಳನ್ನು ಒಳಗೊಂಡಿದೆ. ಕನಸುಗಳ ಮೇಲೆ ರೂಪಗೊಂಡಿರುವ ಈ ನಾಟಕ ಹೆಣ್ಣೊಬ್ಬಳ ಭಾವನೆ, ಆಕೆ ಬಯಸುವ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡುತ್ತದೆ.

Leave a Reply

comments

Related Articles

error: