ಮೈಸೂರು

ಎನ್.ಐ.ಇ ಕಾಲೇಜಿನ ವಾರ್ಷಿಕ ಹಬ್ಬ ‘ರಾಷ್ಟ್ರೀಯ ತಾಂತ್ರಿಕ ಮತ್ತು ಸಾಂಸ್ಕೃತಿಕ; ಸಮ್ಮೇಳನ’

ಮಾ.8 ರಿಂದ 10ರವರೆಗೆ ವಿವಿಧ ಕಾರ್ಯಕ್ರಮಗಳು

ಮೈಸೂರು,ಮಾ.2 : ನಗರದ ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ‘ರಾಷ್ಟ್ರೀಯ ತಾಂತ್ರಿಕ ಹಾಗೂ ಸಾಂಸ್ಕೃತಿಕ’ ಮೂರು ದಿನಗಳ ವಾರ್ಷಿಕ ಸಮ್ಮೇಳನವನ್ನು ಆಯೋಜಿಸಿ ವಿವಿಧ ವಿನೂತನ ಹಾಗೂ ಜಾಗೃತಿ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಸಂಚಾಲಕ ಪ್ರತೀಕ್ ಕಳಸಾಪುರ ತಿಳಿಸಿದರು.

ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾಲೇಜಿನ ಡೈಮಂಡ್ ಜ್ಯೂಬಿಲಿ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ, ಮಾರ್ಚ್ 8ರ ಬೆಳಗ್ಗೆ 10.30ಕ್ಕೆ  ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಅವರು ‘ಟೆಕ್ನನಿಕ್ಸ್’ ಗೆ ಚಾಲನೆ ನೀಡುವರು, ಕಾಲೇಜಿನ ಪ್ರಾಂಶುಪಾಲ ಡಾ.ಜಿ.ರವಿ ಅಧ್ಯಕ್ಷತೆಯಲ್ಲಿ ಪುಟ್ ಲೂಸ್ ತ್ರಿ ಡೀ ಶೋ, ಸಂಜೆ 8ಕ್ಕೆ ಕಾಲೇಜು ಬ್ಯಾಂಡ್ ನಿಂದ ‘ಸಾವನ್’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು ಎಂದು ತಿಳಿಸಿದರು.

ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ  ಕಾರ್ಯದರ್ಶಿ ವಿ.ನಿರೀಕ್ಷಿತಾ ಮಾತನಾಡಿ ಮಾ.9ರಂದು ವಿವಿಧ ತಂಡಗಳ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾ.10ರಂದು ಸಂಜೆ 8 ರಿಂದ ಫ್ಯಾಷನ್ ಶೋ ಮೂರು ಸುತ್ತಿನಲ್ಲಿ ನಡೆಯುವ ಪ್ರದರ್ಶನದಲ್ಲಿ ಮೊದಲೆರಡು ಸುತ್ತಿನಲ್ಲಿ ಸಾಂಪ್ರದಾಯಿಕ ನಂತರ ಆಧುನಿಕ ಉಡುಗೆಗಳಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಹಾಕುವರು. ನಂತರ ಮೈತ್ರಿ ಐಯರ್ ಮತ್ತು ವಿಜೀತ್ ಅವರುಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡುವರು ಎಂದು ಹೇಳಿದರು.

ಮಾ.4ರಂದು ಬೆಳಗ್ಗೆ 6ಕ್ಕೆ (ಕಾಲೇಜಿನಿಂದ) ಮ್ಯಾರಥಾನ್ ‘ರನ್ ಫಾರ್ ವಿಸನ್’ 10 ಹಾಗೂ 5 ಕಿಮಿಯಲ್ಲಿ, (5) ಬೆಳಗ್ಗೆ 11ಕ್ಕೆ ಬೈಕ್ ರ್ಯಾಲಿ ಸುರಕ್ಷತೆಗಾಗಿ ವೇಗ, (6) ಸಂಗೀತ ಶತರಂಜ್ (ಕರ್ನಾಟಕ ಶಾಸ್ತ್ರಿಯ ಸಂಗೀತ) (7) ಕನ್ನಡ ದಿನವನ್ನು ಆಯೋಜಿಸಿದ್ದು ಅಂದು ಜಾನಪದ ನೃತ್ಯ, ಭಾವಗೀತೆ ಸ್ಪರ್ಧೆ ನಡೆಯುವುದು. ಅಲ್ಲದೇ ಪ್ರತಿದಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಟಿ.ಹೆಚ್.ಸದಾಶಿವಮೂರ್ತಿ, ಕಾರ್ಯದರ್ಶಿ ಪುಣ್ಯ ನಂಜಪ್ಪ, ಅಭಿಲಾಷ್, ವನಮಾಲ, ಸಂಜಯ್ ಕುಮಾರ್, ಎಸ್.ಆರ್.ಗಾಯಕ್ವಾಡ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: