ಮೈಸೂರು

ಕನ್ನಡದಲ್ಲಿನ ತಾಂತ್ರಿಕತೆಯ ಅಡ್ಡಿಗಳು ನಿವಾರಣೆಯಾಗಲಿ : ಡಾ.ಎಲ್. ರಾಮಮೂರ್ತಿ

ವ್ಯಾಕರಣ, ವಾಕ್ಯ ರಚನೆ ಸೇರಿದಂತೆ ಕಂಪ್ಯೂಟರ್ ನಲ್ಲಿ ಕನ್ನಡದಲ್ಲಿ ಟೈಪ್ ಮಾಡುವುದಕ್ಕೆ ಬಹಳಷ್ಟು ಅಡ್ಡಿಗಳಿದ್ದು ಇವೆಲ್ಲವನ್ನೂ ಭಾಷಾ ವಿಜ್ಞಾನಿಗಳು ನಿವಾರಿಸಬೇಕು ಎಂದು ಭಾರತೀಯ ಭಾಷಾ ಸಂಸ್ಥಾನದ ಭಾರತೀಯ ಭಾಷೆಗಳ ಭಾಷಾ ದತ್ತಾಂಶ ಒಕ್ಕೂಟದ ಸಂಶೋಧನಾ ಅಧಿಕಾರಿ ಡಾ.ಎಲ್.ರಾಮಮೂರ್ತಿ ತಿಳಿಸಿದರು.

ಮೈಸೂರಿನ ಮಾನಸಗಂಗೋತ್ರಿಯಲ್ಲಿ ಭಾರತೀಯ ಭಾಷಾ ಸಂಸ್ಥಾನದ ಭಾರತೀಯ ಭಾಷೆಗಳ ಭಾಷಾ ದತ್ತಾಂಶ ಒಕ್ಕೂಟ, ಮೈಸೂರು ವಿಶ್ವವಿದ್ಯಾನಿಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ವತಿಯಿಂದ ಏರ್ಪಡಿಸಿದ್ದ ಸಹಜ ಭಾಷಾ ಸಂಸ್ಕರಣೆ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡ ಡಾ.ಎಲ್.ರಾಮಮೂರ್ತಿ ಮಾತನಾಡಿದರು. ಅಗಾಧ ಮಾಹಿತಿಗಳು ಇಂದು ಅಂತರ್ಜಾಲದಲ್ಲಿ ಲಭ್ಯವಿದೆ. ಇವೆಲ್ಲವೂ ಇಂಗ್ಲಿಷ್ ಭಾಷೆಯಲ್ಲಿದೆ. ಕನ್ನಡದಲ್ಲಿ ಬೆರಳೆಣಿಕೆಯಷ್ಟು ಮಾತ್ರವಿದೆ. ಕೆಲವು ಮೊಬೈಲ್ಗಳಳ್ಲಿ ಇನ್ನೂ ಕೆಲವು ಸಂದೇಶಗಳನ್ನು ಕನ್ನಡದಲ್ಲಿ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಅವೆಲ್ಲವೂ ಕನ್ನಡದಲ್ಲಿಯೂ ಸಿಗುವಂತಾಗಬೇಕು ಎಂದರು.

ಕನ್ನಡ ಭಾಷೆ ತಾಂತ್ರಿಕತೆಯ ಪ್ರಗತಿಯಲ್ಲಿ ಸಾಕಷ್ಟು ಹಿಂದಿದೆ. ಇಂಗ್ಲಿಷ್ ಭಾಷೆಗಳಲ್ಲಾದರೆ ಸಾಕಷ್ಟು ತಾಂತ್ರಿಕತೆ ಇದ್ದು ಸಂಶೋಧಕರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ, ಸಿಸ್ಟ್ ನಿರ್ದೇಶಕ ಡಾ.ಎ.ಎಂ.ಸುಧಾಕರ ಉಪಸ್ಥಿತರಿದ್ದರು.

Leave a Reply

comments

Related Articles

error: