ಮೈಸೂರು

ಪಿಸ್ತೂಲ್ ಮಾರಾಟ ಮಾಡುವ ದಂದೆ ಭೇದಿಸಿದ ಪೊಲೀಸರು : ನಾಲ್ವರು ಆರೋಪಿಗಳ ಬಂಧನ

ಮೈಸೂರು,ಮಾ.2:- ಪಿಸ್ತೂಲು ಮಾರಾಟ ಮಾಡುವ ದಂಧೆಯನ್ನ ಭೇದಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರು ಜೈಲಿನಿಂದ ಪಿಸ್ತೂಲು ಮಾರಾಟಕ್ಕೆ ಡೀಲ್ ಕುದುರಿಸುತ್ತಿದ್ದ ಕಿಂಗ್ ಪಿನ್ ಅಫ್ಸರ್ ಖಾನ್  ಸೇರಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸುವಲ್ಲಿ  ನಂಜನಗೂಡು ಪೊಲೀಸರು  ಯಶಸ್ವಿಯಾಗಿದ್ದಾರೆ. ಮೈಸೂರು ಕಾರಾಗೃಹದ ಸಜಾ ಖೈದಿ ಅಫ್ಸರ್ ಖಾನ್,ಬಿಜೆಪಿ ಕಾರ್ಯಕರ್ತ ಧನರಾಜ್ ಬೋಲಾ,ಶಾಹಿನ್ಶಾ ಹಾಗೂ ಸಾಧಿಕ್ ಪಾಷಾ ಬಂಧಿತರಾಗಿದ್ದಾರೆ. ಪಿಸ್ತೂಲಿಗಾಗಿ  ಜೈಲಿಗೆ ಎಂಟ್ರಿ ಹಾಕುತ್ತಿದ್ದ ವ್ಯಕ್ತಿಗಳು ಹಣ ಪಾವತಿ ಮಾಡಿದರೆ ಅಫ್ಸರ್ ಪಾಷಾ ಪಿಸ್ತೂಲು ಮಾರಾಟ ಮಾಡುವ ವ್ಯಕ್ತಿಯ ಮೊಬೈಲ್ ನಂಬರ್ ನೀಡುತ್ತಿದ್ದ.  ಆ ಹಣವನ್ನು ಪಡೆಯಲು ಮತ್ತೊಬ್ಬ ವ್ಯಕ್ತಿ ಎಂಟ್ರಿ ಹಾಕಿಸಿ ಸಂಗ್ರಹಿಸುತ್ತಿದ್ದ. ಹೀಗೆ ಜೈಲಿನಿಂದಲೇ ವ್ಯವಹಾರ ಕುದುರಿಸುತ್ತಿದ್ದ ಅಫ್ಸರ್ ಪಾಷಾ ಮಡಿಕೇರಿ ಹಾಗೂ ಚಾಮರಾಜ ನಗರದಲ್ಲಿದ್ದ ವ್ಯಕ್ತಿಗಳಿಗ ಪಿಸ್ತುಲು ಮಾರಾಟ ಮಾಡಿಸಿದ್ದಾನೆ.60 ರಿಂದ 70ಸಾವಿರಕ್ಕೆ ಪಿಸ್ತೂಲು ಮಾರಾಟವಾಗಿದೆ. ಹೀಗೆ ಬಂದ ಪಿಸ್ತೂಲನ್ನು ಧನರಾಜ್ ಭೊಲಾ ಹಾಗೂ ಇನ್ನಿಬ್ಬರನ್ನು ಇಟ್ಟುಕೊಂಡು ಹಣವಂತರನ್ನು ಹೆದರಿಸಲು ಸ್ಕೆಚ್ ರೆಡಿ ಮಾಡುತ್ತಿದ್ದರು. ಈ ಮಾಹಿತಿ ಅರಿತ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ದಾಳಿ ನಡೆಸಿ ಧನರಾಜ್ ಭೊಲಾ ಹಾಗೂ ಇನ್ನಿಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಿಂಗ್ ಪಿನ್  ಅಫ್ಸರ್ ಪಾಷಾ ಪಾತ್ರ ಬೆಳಕಿಗೆ ಬಂದಿದೆ. ಬಂಧಿತರಿಂದ ಒಂದು ಪಿಸ್ತೂಲು ಹಾಗೂ 12ಗುಂಡುಗಳನ್ನು ವಶ ಪಡಿಸಿಕೊಳ್ಳಾಗಿದೆ. ಚುನಾವಣೆ ಸಮೀಪದಲ್ಲಿ ಇರುವ ಕಾರಣ ರಾಜಕಾರಿಣಿಗಳನ್ನೂ ಸಹ ಬೆದರಿಸಲು ಸ್ಕೆಚ್ ಹಾಕಿದ್ದರು ಎನ್ನುವ ಮಾಹಿತಿಯನ್ನು ಪೊಲೀಸರಿಗೆ ಆರೋಪಿಗಳು ತಿಳಿಸಿದ್ದಾರೆ. ಧನರಾಜ ಭೋಲಾ ಕೇವಲ ಬಿಜೆಪಿ ಕಾರ್ಯಕರ್ತ ಮಾತ್ರವಲ್ಲದೆ ರೌಡಿಶೀಟರ್ ಆಗಿದ್ದಾನೆ. ಜಿಲ್ಲಾ ಎಸ್ಪಿ ರವಿ.ಡಿ.ಚೆನ್ನಣ್ಣನವರ್, ಎಎಸ್ಪಿ ರುಧ್ರಮುನಿ,ಮೈಸೂರು ಉಪವಿಭಾಗದ ಎಎಸ್ಪಿ ಅರುಣಾಂಷ ಗಿರಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಪಿಎಸೈ ಸವಿ,ಸಿಬ್ಬಂದಿಗಳಾದ ಕೃಷ್ಣ, ಸತೀಶ್, ಲತೀಫ್, ಪ್ರಸನ್ನಕುಮಾರ್,ಹಾಗೂ ಮಹೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: