ಮೈಸೂರು

ವಶೀಕರಣ ಮಾಡಿಕೊಡುವುದಾಗಿ ನಂಬಿಸಿ ಚಿನ್ನ-ಬೆಳ್ಳಿಯೊಂದಿಗೆ ಪರಾರಿ

ಪ್ರೀತಿಸಿದ ಹುಡುಗಿ ನಿನ್ನೆ ಸೇರುವಂತೆ ವಶೀಕರಣ ಮಾಡಿಕೊಡುವುದಾಗಿ ನಂಬಿಸಿ ಪೂಜೆಗೆಂದು ನೀಡಿದ್ದ  ಚಿನ್ನ-ಬೆಳ್ಳಿ ಲೋಹಗಳನ್ನು ಎತ್ತಿಕೊಂಡು ವ್ಯಕ್ತಿಯೋರ್ವ ಪರಾರಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕೆ.ಆರ್.ಮೊಹಲ್ಲಾದ ಕಾಕಲವಾಡಿ ನಿವಾಸಿ ಅಜ್ಮತ್ ಖಾನ್(28)ಎಂಬವರೇ ಮೋಸ ಹೋದ ವ್ಯಕ್ತಿಯಾಗಿದ್ದಾರೆ. ಇವರು ಹುಡುಗಿಯೋರ್ವಳನ್ನು ಪ್ರೀತಿಸುತ್ತಿದ್ದು, ಆಕೆಯನ್ನು ವಶೀಕರಣಗೊಳಿಸಿಕೊಳ್ಳಲು ಉತ್ತರ ಪ್ರದೇಶ ಮೂಲದ ಬಾಬಾಖಾನ್ ಅವರನ್ನು ಭೇಟಿಯಾಗಿ ಸಹಾಯ ಕೋರಿದ್ದಾರೆ. ಬಾಬಾಖಾನ್ ಹುಡುಗಿಯನ್ನು ವಶೀಕರಣಗೊಳಿಸಿಕೊಳ್ಳಲು ವಿಶೇಷ ಪೂಜೆ ನಡೆಸಬೇಕು. ಪೂಜೆಗೆ ಕಾಲು ಕೆ.ಜಿ.ಚಿನ್ನ, ಕಾಲು ಕೆ.ಜಿ.ಬೆಳ್ಳಿ, ಕಾಲು ಕೆ.ಜಿ. ತಾಮ್ರ, ಕಾಲು ಕೆ.ಜಿ.ಹಿತ್ತಾಳೆ, ಕಾಲು ಕೆ.ಜಿ.ಕಬ್ಬಿಣದ ಲೋಹಗಳು  ಬೇಕಾಗಲಿದೆ. ಕೊಂಡು ತನ್ನಿ ಎಂದಿದ್ದಾರೆ ಎನ್ನಲಾಗಿದೆ. ಅಜ್ಮತ್ ಖಾನ್ ಇವೆಲ್ಲವನ್ನೂ ನವೆಂಬರ್ 19ರಂದು ಪೂಜೆಗೆ ಕೊಂಡೊಯ್ದು ಕೊಟ್ಟಿದ್ದಾರೆ.   ಬಾಬಾಖಾನ್   ಪೂಜೆ ನೆರವೇರಿಸಿ ಪೆಟ್ಟಿಗೆಯೊಂದನ್ನು ಕೊಟ್ಟಿದ್ದು  ನವೆಂಬರ್ 20ರ ರಾತ್ರಿ 9ಗಂಟೆಯ ನಂತರ ಅದನ್ನು ತೆರೆಯಲು ಹೇಳಿದ್ದಾರೆ. ಅಜ್ಮತ್ ಖಾನ್  ಪೆಟ್ಟಿಗೆ ತೆರೆದು ನೋಡಲಾಗಿ ಅದರಲ್ಲಿ ಚಿನ್ನ ಮತ್ತು ಬೆಳ್ಳಿಯ ಲೋಹಗಳು ಇರಲಿಲ್ಲ. ಇದನ್ನು ಗಮನಿಸಿದ ಅಜ್ಮತ್ ಖಾನ್ ಮೈಸೂರು ನಗರದ ಕೃಷ್ಣರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಠಾಣೆಯ ಇನ್ಸಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಇದೀಗ ಆರೋಪಿ ಬಾಬಾಖಾನ್ ಗಾಗಿ ಬಲೆ ಬೀಸಿದೆ.

Leave a Reply

comments

Related Articles

error: