ಕರ್ನಾಟಕ

ಶ್ರೀರಂಗಪಟ್ಟಣ: ಬೊಮ್ಮೂರು ಅಗ್ರಹಾರದಲ್ಲಿ ನಿಷೇಧಾಜ್ಞೆ ಮುಂದುವರಿಕೆ

ಮಂಡ್ಯ (ಮಾ.2): ಶ್ರೀರಂಗಪಟ್ಟಣ ತಾಲ್ಲೂಕು ದಂಡಾಧಿಕಾರಿಗಳ ಆದೇಶದ ಅನ್ವಯ ಶಾಂತಿ ಮತ್ತು ಸುವ್ಯವಸ್ಥೆ ಹಾಗೂ ಕಾನೂನು ಪಾಲನೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಶ್ರೀರಂಗಪಟ್ಟಣ ತಾಲ್ಲೂಕು ಬೊಮ್ಮೂರು ಅಗ್ರಹಾರದ ಸರ್ವೆ ನಂ 241 ರಲ್ಲಿನ ಸುತ್ತಮುತ್ತಲಿನ ರಾಷ್ಟ್ರೀಯ ಹೆದ್ದಾರಿ 275 ಕ್ಕೆ ಹೊಂದಿಕೊಂಡಂತೆ ಇರುವ ಮದರಸ ಕಟ್ಟಡ, ನಿರ್ಮಾಣದ ಕಟ್ಟಡ, ಹೊಂದಿಕೊಂಡಿರುವಂತೆ 500 ಮೀಟರ್ ವರಗೆ ವ್ಯಾಪ್ತಿಯ ಪ್ರದೇಶದಲ್ಲಿ ಜನವರಿ 31 ರಿಂದ ಫೆಬ್ರವರಿ 28 ರ ಮದ್ಯರಾತ್ರಿ 12 ಗಂಟೆಯ ವರಗೆ ಕಾಲಂ 144 ಸಿ.ಆರ್.ಪಿ.ಸಿ ರೀತ್ಯಾ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಈ ನಿಷೇಧಾಜ್ಞೆಯು ಫೆಬ್ರವರಿ 28 ರ ಮಧ್ಯರಾತ್ರಿ 12 ಗಂಟೆಗೆ ಕೊನೆಗೊಳ್ಳುತ್ತಿದ್ದ ಹಿನ್ನೇಲೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ನಿರ್ವಾಹಕ ದಂಡಾಧಿಕಾರಿಗಳು ಮಾರ್ಚ್ 31, 2018 ಮಧ್ಯರಾತ್ರಿ 12 ರವರಗೆ ನಿಷೇಧಾಜ್ಞೆ ಜಾರಿಯಾಗಿರುತ್ತದೆ ಎಂದು ಮಂಡ್ಯ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ. (ಎನ್‍.ಬಿ)

Leave a Reply

comments

Related Articles

error: