ಕರ್ನಾಟಕದೇಶಮೈಸೂರು

ಭಾರತೀಯ ರೈಲ್ವೆ ವತಿಯಿಂದ 10 ದಿನಗಳ ಗಂಗಾ-ಯಮುನಾ ಸಂಗಮ ವಿಶೇಷ ಯಾತ್ರೆ ಕೊಡುಗೆ

ಭಾರತೀಯ ರೈಲ್ವೆ ಕ್ಯಾಟರಿಂಗ್ ವಿಭಾಗದಿಂದ ‘ಕಡಿಮೆ ದರದಲ್ಲಿ ಭಾರತ ದರ್ಶನ’ ಹೆಸರಿನಲ್ಲಿ ದೇಶದ ಸುಪ್ರಸಿದ್ಧ ಯಾತ್ರಾ ಹಾಗೂ ಧಾರ್ಮಿಕ ಸ್ಥಳಗಳ ವೀಕ್ಷಣೆ ಮಾಡಲು ವ್ಯವಸ್ಥೆ ಮಾಡಿದೆ. ಈಗಲೇ ನಿಮ್ಮ ಟಿಕೆಟ್‍ ಅನ್ನು ಮುಂಗಡವಾಗಿ ಬುಕ್ ಮಾಡಿ. ಈ ಪ್ರವಾಸಿ ಪ್ಯಾಕೇಜ್ ಪಾಕೆಟ್ ಸ್ನೇಹಿಯಾಗಿದೆ.

ಗಣೇಶ ಚತುರ್ಥಿಯ  ಅಂಗವಾಗಿ 10 ದಿನಗಳ ‘ಭಾರತ್ ದರ್ಶನ್’ ವಿಶೇಷ ಪ್ರವಾಸ ‘ಗಂಗಾ, ಯಮುನಾ ಸಂಗಮ ಯಾತ್ರಾ’ ಮಧುರೈನಿಂದ ಆರಂಭವಾಗುವುದು. ಪವಿತ್ರ ಕ್ಷೇತ್ರಗಳಾದ ಗಯಾ, ವಾರಣಸಿ, ಹರಿದ್ವಾರ, ಅಲಹಾಬಾದ್, ದೆಹಲಿ ಮತ್ತು ಮಥುರಾ ನಗರಗಳಿಗೆ ಭೇಟಿ ನೀಡಿ ವೀಕ್ಷಿಸಬಹುದು. ಅಕ್ಟೋಬರ್ 13ರಿಂದ ಪ್ರವಾಸ  ಆರಂಭವಾಗುವುದು.

ಕೇವಲ 8,360 ರೂಪಾಯಿಗಳು ಒಂದು ಸೀಟಿಗೆ. ಈ ವಿಶೇಷ ರೈಲು ಮಧುರೈಯಿಂದ ಹೊರಡಲಿದ್ದು ಅಕ್ಟೋಬರ್ 13ರಂದು ಬೆಂಗಳೂರು ತಲುಪಲಿದೆ. ಪ್ರವಾಸಿಗಳ ಆದ್ಯತೆ ಮೇರೆಗೆ ಎಸಿ ಮತ್ತು ನಾನ್ ಎಸಿ ಛತ್ರಗಳನ್ನು ಹಾಗೂ ಪ್ರವಾಸದಾದ್ಯಂತ ಎಸಿ ರಹಿತ ವಾಹನದ ವ್ಯವಸ್ಥೆ ಇರುವುದು. ದಕ್ಷಿಣ ಭಾರತೀಯ ಶೈಲಿಯ ಆಹಾರವನ್ನು ನೀಡಲಾಗುವುದು.

‘ಭಾರತ ದರ್ಶನ’ವೂ ಅಕ್ಟೋಬರ್ 13 ರಿಂದ ಮಧುರೈನಿಂದ ಆರಂಭವಾಗುತ್ತಿದ್ದು ಬೆಂಗಳೂರು (ವೈಟ್ ಫೀಲ್ಡ್) ಮೂಲಕ ದೆಹಲಿ, ಗಯಾ, ವಾರಣಾಸಿಗಳ ಹತ್ತು ದಿನಗಳ ಪ್ರವಾಸವು ಸಾಗುವುದು. ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿಯೂ ಇರುವುದು.

ಪ್ರವಾಸಿಗರಿಗೆ ವಸತಿ ವ್ಯವಸ್ಥೆ ಮಾಡಲು ಇಲಾಖೆಯ ನಿರ್ಧಾರವೆ ಅಂತಿಮ. ಪ್ರವಾಸದ ಸಮಯದಲ್ಲಿ ಬರುವ ಹೆಚ್ಚಿನ ಖರ್ಚು ವೆಚ್ಚಗಳನ್ನು ಪ್ರವಾಸಿಗರೇ ಭರಿಸತಕ್ಕದ್ದು.

Leave a Reply

comments

Related Articles

error: