ಕರ್ನಾಟಕಪ್ರಮುಖ ಸುದ್ದಿ

ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಬಂಧನ

ಬೆಂಗಳೂರು,ಮಾ.3-ಅಪಹರಣದ ಆರೋಪದ ಮೇಲೆ ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

ಬಾರ್ ಸಪ್ಲೈರ್ ನ್ನು ಬಂಧಿಸಿ ಚಿತ್ರ ಹಿಂಸೆ ನೀಡಿದಷ್ಟೇ ಅಲ್ಲದೆ, ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಬಾರ್ ಸಪ್ಲೈಯರ್ ಗಿರೀಶ್ ಸುನಾಮಿ ಕಿಟ್ಟಿ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಜ್ಞಾನಭಾರತಿ ಪೊಲೀಸರು ಅಪಹರಣ ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯಿದೆಯಡಿ ಸುನಾಮಿ ಕಿಟ್ಟಿ ಸೇರಿದಂತೆ, ಸ್ನೇಹಿತರಾದ ಯೋಗಂದ್ರ ಮತ್ತು ಅರ್ಜುನ್ ನ್ನು ಬಂಧಿಸಿದ್ದು, ಕಿಟ್ಟಿ ಸ್ನೇಹಿತ ಸುನೀಲ್ ಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

ಕಿಟ್ಟಿ ಸ್ನೇಹಿತ ಸುನೀಲ್ ಪತ್ನಿಯನ್ನು ತೌಶಿಕ್ ಎಂಬುವವರು ಪ್ರೀತಿಸುತ್ತಿದ್ದಿದ್ದು, ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಜ್ಞಾನಭಾರತಿ ಬಾರ್ ಅಂಡ್ ರೆಸ್ಟೋರೆಂಟ್ ಬಳಿ ಹೋಗಿ ಸಪ್ಲೈಯರ್ ಬಳಿ ತೌಶಿಕ್ ಫೋಟೋ ತೋರಿಸಿ ಅವರ ಬಗ್ಗೆ ಮಾಹಿತಿ ಪಡೆಯಲು ಕಿಟ್ಟಿ ಮತ್ತವರ ಸ್ನೇಹಿತರು ಪ್ರಯತ್ನಿಸಿದ್ದಾರೆ. ಬಾರ್ ಸಪ್ಲೈಯರ್ ಗಿರೀಶ್ ವ್ಯಕ್ತಿಯನ್ನು ನಾನು ನೋಡಿದ್ದೇನೆ. ದಿನ ರಾತ್ರಿ ಬಾರ್ ಗೆ ಬರುತ್ತಾನೆ ಎಂದು ಮಾಹಿತಿ ನೀಡಿದ್ದಾನೆ. ಆದರೆ ಅವನ ವಿಳಾಸ ತಿಳಿಸುವಂತೆ ಒತ್ತಾಯಿಸಿ ಗಿರೀಶ್ ನನ್ನು ಕಿಡ್ನಾಪ್ ಮಾಡಿಕೊಂಡು ಹೋಗಿ ಚಿತ್ರಹಿಂಸೆ ನೀಡಿದ್ದಾರೆ.

ಒಂದೊಮ್ಮೆ ನಿನ್ನ ಅಪಹರಣ ಮಾಡಿರುವ ವಿಷಯ ಎಲ್ಲಿಯಾದರೂ ಬಾಯಿಬಿಟ್ಟರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದರು ಎನ್ನಲಾಗಿದೆ. (ವರದಿ-ಎಂ.ಎನ್)

 

Leave a Reply

comments

Related Articles

error: