
ಕರ್ನಾಟಕ
ನದಿಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ
ಚಿಕ್ಕಮಗಳೂರು,ಮಾ.03: ಹೇಮಾವತಿ ನದಿಯಲ್ಲಿ ರಾಶಿ ಮೀನುಗಳು ಸಾವನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದ ಬಳಿಯ ನಡೆದಿದೆ.
ಮೀನು ಹಿಡಿಯಲು ಕಿಡಿಗೇಡಿಗಳು ನೀರಿಗೆ ವಿಷ ಹಾಕಿದರಿಂದ ಸಾವಿರಾರು ಮೀನುಗಳ ಮಾರಣ ಹೋಮವಾಗಿದೆ. ಇದರಿಂದ ಮಲೆನಾಡಿನ ಜೀವನದಿಯಾಗಿರುವ ಹೇಮಾವತಿ ನದಿ ಕಲುಷಿತಗೊಂಡಿದೆ. ಹೇಮಾವತಿ ನದಿ ಇಲ್ಲಿನ ಜಾವಳಿಯಲ್ಲಿ ಹುಟ್ಟಿ ಮೂಡಿಗೆರೆ ಮೂಲಕ ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಡ್ಯಾಂಗೆ ನೀರು ಸೇರುತ್ತದೆ.
ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ವರದಿ: ಪಿ. ಎಸ್)