ಮೈಸೂರು

ರಾಷ್ಟ್ರೀಯ ಕೃಷಿ ವಿಜ್ಞಾನ ಕಾರ್ಯಾಗಾರ : ಪ್ರಧಾನಿ ಮೋದಿಯೊಂದಿಗೆ ಮೈಸೂರಿನ ತಂಡ

ಮೈಸೂರು,ಮಾ.3 : ರಾಷ್ಟ್ರೀಯ ಕೃಷಿ ವಿಜ್ಞಾನ ಅಕಾಡೆಮಿಯು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿತ್ತು.

ಕಾರ್ಯಾಗಾರದಲ್ಲಿ ನಾಡಿನ ಎಲ್ಲಾ ರಾಜ್ಯಗಳ ಪ್ರಮುಖ ರೈತರು, ಉದ್ಯಮಿಗಳು, ವಿಜ್ಞಾನಿಗಳು, ಸಾವಯುವ ಕೃಷಿಕರು ಭಾಗಿಯಾಗಿ ಸಂವಾದ ಗೋಷ್ಠಿಗಳನ್ನು ನಡೆಸಿದರು. ಈ ಕಾರ್ಯಾಗಾರದಲ್ಲಿ ಮೈಸೂರಿನ ದಿವ್ಯಾ ಫೌಂಡೇಷನ್ ಟ್ರಸ್ಟಿ  ಹರೀಶ್ ಶಣೈ ಅವರ ನೇತೃತ್ವದ 40 ಜನ ತಂಡ ಪಾಲ್ಗೊಂಡಿತ್ತು.

ಕಾರ್ಯಾಗಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಿಮಾಚಲ ಪ್ರದೇಶದ ರಾಜ್ಯಪಾಲ ಆಚಾರ್ಯದೇವ ವೃತ್, ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮೊದಲಾದವರು ಸಮಾರೋಪದಲ್ಲಿ ಭಾಗಿಯಾಗಿದ್ದರು.. (ಕೆ.ಎಂ.ಆರ್)

Leave a Reply

comments

Related Articles

error: