ಮೈಸೂರು

ದಿ.ಹೆಚ್.ಎಸ್.ಮಹದೇವ ಪ್ರಸಾದ್ ಅವರ ‘ಮಹಾಪ್ರಸಾದ’ ಸಂಸ್ಮರಣೆ ಬಿಡುಗಡೆ ಮಾ.5.

ಮೈಸೂರು,ಮಾ.3 : ಮಾಜಿ ಸಚಿವ ದಿ.ಹೆಚ್.ಎಸ್.ಮಹದೇವ ಪ್ರಸಾದ್ ಅವರ ಸಂಸ್ಮರಣ ಸಂಪುಟ ಬಿಡುಗಡೆ ಸಮಾರಂಭವನ್ನು ಮಾ.5ರ ಬೆಳಗ್ಗೆ 11 ಗಂಟೆಗೆ ಗುಂಡ್ಲುಪೇಟೆಯ ಹಾಲಹಳ್ಳಿಯಲ್ಲಿ ಆಯೋಜಿಸಿದೆ.

ತುಮಕೂರಿನ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಕನಕಪುರ ದೇಗುಲ ಮಠದ ಶ್ರೀಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಸಿಎಂ ಸಿದ್ದರಾಮಯ್ಯ ‘ಮಹಾಪ್ರಸಾದ’ ಸಂಸ್ಮರಣ ಸಂಪುಟವನ್ನು ಬಿಡುಗಡೆಗೊಳಿಸುವರು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕಾಂಗ್ರೆಸ್ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಕೆ.ಜೆ.ಜಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಕೆ.ಆರ್.ರಮೇಶ್ ಕುಮಾರ್, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವಾರು ಗಣ್ಯರು, ಮಠಾಧೀಶರು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: