ಕರ್ನಾಟಕ

ಆಟೋ ಗೆ ಖಾಸಗಿ ಬಸ್ ಡಿಕ್ಕಿ ; ಮೂವರ ಸಾವು

ತುಮಕೂರು,ಮಾ.5: ಆಟೋಗೆ  ಖಾಸಗಿ ಬಸ್ ಡಿಕ್ಕಿಹೊಡೆದ ಪರಿಣಾಮ ಆಟೋದಲ್ಲಿದ್ದ ಮೂವರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ತುಮಕೂರು ನಗರದ ಹೊರವಲಯದಲ್ಲಿರುವ ಬೆಂಳಗುಂಬದಲ್ಲಿ ನಡೆದಿದೆ.

ಹನಮುಂತಪುರದ ನಿವಾಸಿಗಳಾಗಿದ ಮಾರುತಿ, ದೀಪು ಹಾಗೂ ನಜರಾಬಾದ್ ನಿವಾಸಿ ಶಬ್ಬಾಸ್ ಮೃತ ದುರ್ದೈವಿಗಳು. ಅಪಘಾತದಲ್ಲಿ ವಸಂತಕುಮಾರ್ ಎಂಬವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಟೋದಲ್ಲಿದ್ದವರು ದೇವರಾಯನದುರ್ಗ ದಿಂದ ತುಮಕೂರು ನಗರಕ್ಕೆ ಬರುತ್ತಿದ್ದರು. ಖಾಸಗಿ ಬಸ್ ಊರ್ಡಿಗೆರೆ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಬೆಳಗುಂಬದ ಕೆಂಪೇಗೌಡ ಕಾಲೇಜಿನ ಬಳಿ ಇರುವ ತಿರುವಿನಲ್ಲಿ ಪರಸ್ಪರ ವಾಹನ ಕಾಣದೇ ಇದ್ದುದರಿಂದ ವೇಗವಾಗಿ ಬಂದು ಮುಖಾಮುಖಿ ಡಿಕ್ಕಿ ಹೊಡೆದಿವೆ .ಡಿಕ್ಕಿ ಹೊಡೆದ ರಭಸಕ್ಕೆ ಆಟೋದಲ್ಲಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಾಳು ವಸಂತಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಕ್ಯಾತಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ವರದಿ: ಪಿ.ಎಸ್ )

Leave a Reply

comments

Related Articles

error: