ಕರ್ನಾಟಕ

ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಬೆಂಗಳೂರು,ಮಾ.05: ನಿವೃತ್ತ ಯೋಧ ಖಿನ್ನತೆಗೆ ಒಳಗಾಗಿ ತನ್ನ ಬಳಿಯಿದ್ದ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೊರಮಾವಿನಲ್ಲಿ ನಡೆದಿದೆ.

ಎಲೈಟ್ ಅಪಾರ್ಟ್‍ಮೆಂಟ್ ನಿವಾಸಿಯಾಗಿದ್ದ ನಿವೃತ್ತ ಯೋಧ ಅನಿಲ್ ಅಹುಜಾ ಎಂಬವರು  ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಜೊತೆಗೆ ಸಾಕಷ್ಟು ಸಲ ಆತ್ಮಹತ್ಯೆಗೆ ಕೂಡ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಭಾನುವಾರ ರಾತ್ರಿ ತನ್ನ ರೂಮ್‍ನಲ್ಲಿ ಶೂಟ್ ಮಾಡಿಕೊಂಡು ಅನಿಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ. (ವರದಿ; ಪಿ.ಎಸ್ )

Leave a Reply

comments

Related Articles

error: