ಕರ್ನಾಟಕಮೈಸೂರು

ಯಳಂದೂರು ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ಕಾಂಗ್ರೆಸ್‍ನ ನಿಂಗರಾಜು, ಉಪಾಧ್ಯಕ್ಷರಾಗಿ ಭೀಮಪ್ಪ ಆಯ್ಕೆ

ಯಳಂದೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಿಂಗರಾಜು ಅಧ್ಯಕ್ಷರಾಗಿ ಆಯ್ಕೆಯಾದರೆ ಬಿಜೆಪಿಯ ಭೀಮಪ್ಪ ಉಪಾಧ್ಯಕ್ಷರಾಗಿ ಆಯ್ಕೆಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು.

5 ಸದಸ್ಯರನ್ನೊಳಗೊಂಡ ಕಾಂಗ್ರೆಸ್ ಪಕ್ಷದಿಂದ 1 ನೇ ವಾರ್ಡಿನ ನಾಗರತ್ನ ಮಹೇಶ್ ಅಧಿಕೃತ ಅಭ್ಯರ್ಥಿಯಾಗಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ 10 ನೇ ವಾರ್ಡಿನ ಮಹಾದೇವಮ್ಮ ಚಿಕ್ಕರಂಗಯ್ಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಇದೇ ಪಕ್ಷದ ನಿಂಗರಾಜು ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದರೆ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಭೀಮಪ್ಪ ನಾಮಪತ್ರ ಸಲ್ಲಿಸಿದ್ದರು.

ಶಾಸಕರ ಒಂದು ಮತ, ಪಟ್ಟಣ ಪಂಚಾಯ್ತಿ ಸದಸ್ಯರ 11 ಮತಗಳು ಸೇರಿದಂತೆ ಒಟ್ಟು 12 ಮತಗಳು ಚಲಾವಣೆಗೊಂಡವು. ಇದರಲ್ಲಿ ನಿಂಗರಾಜು ಪರವಾಗಿ 8 ಮತಗಳು ಲಭಿಸಿದರೆ ನಾಗರತ್ನ ರವರಿಗೆ 4 ಮತಗಳು ಲಭ್ಯವಾದವು. ಉಪಾಧ್ಯಕ್ಷರ ಸ್ಥಾನದ ಸ್ಪರ್ಧಿ ಬಿಜೆಪಿ ಪಕ್ಷದ ಭೀಮಪ್ಪ ರವರಿಗೆ 8 ಮತಗಳು ಲಭಿಸಿದರೆ, ಕಾಂಗ್ರೆಸ್‍ನ ಮಹಾದೇವಮ್ಮ ಚಿಕ್ಕರಂಗಯ್ಯ ರವರಿಗೆ 4 ಮತಗಳು ಮಾತ್ರ ಲಭಿಸಿದವು.

ವಿಜಯಶಾಲಿಯಾದ ಕಾಂಗ್ರೆಸ್ ನ ಅಭ್ಯರ್ಥಿಯಾದ ನಿಂಗರಾಜು ಪರ ಕಾಂಗ್ರೆಸ್ ನ ಸದಸ್ಯರಾದ ಬಿ. ರವಿ, ಬಿಜೆಪಿ ಸದಸ್ಯರಾದ ವೈ. ವಿ ಮುರುಳೀಕೃಷ್ಣ , ಭೀಮಪ್ಪ, ಜ್ಯೋತಿ ಶ್ರೀನಿವಾಸ್, ನಾಗರಾಜು, ಜೆಡಿಎಸ್ ಸದಸ್ಯೆ ವೈ.ಜಿ. ಶಿಲ್ಪರಂಗನಾಥ್, ಪಕ್ಷೇತರ ಅಭ್ಯರ್ಥಿಯಾದ ಜೆ. ಶ್ರೀನಿವಾಸ್ ಬೆಂಬಲ ಸೂಚಿಸಿದರೆ, ಸೋಲುಂಡ ನಾಗರತ್ನ ಪರ ಕಾಂಗ್ರೆಸ್ ಸದಸ್ಯರಾದ ವೈ.ವಿ. ಉಮಾಶಂಕರ್, ಮಹಾದೇವಚಿಕ್ಕರಂಗಯ್ಯ, ಶಾಸಕ ಎಸ್. ಜಯಣ್ಣ ಮತ ಬೆಂಬಲ ಸೂಚಿಸಿದರು.

ಹಾಗೆಯೇ ಉಪಾಧ್ಯಕ್ಷರಾಗಿ ಗೆಲುವು ಸಾಧಿಸಿದ ಭೀಮಪ್ಪ ಪರ ಕಾಂಗ್ರೆಸ್ ನ ಸದಸ್ಯರಾದ ಬಿ. ರವಿ, ನಿಂಗರಾಜು, ಬಿಜೆಪಿ ಸದಸ್ಯರಾದ ವೈ. ವಿ. ಮುರುಳೀಕೃಷ್ಣ , ಭೀಮಪ್ಪ, ಜ್ಯೋತಿ ಶ್ರೀನಿವಾಸ್, ನಾಗರಾಜು, ಜೆಡಿಎಸ್ ಸದಸ್ಯೆ ವೈ.ಜಿ. ಶಿಲ್ಪರಂಗನಾಥ್, ಪಕ್ಷೇತರ ಅಭ್ಯರ್ಥಿಯಾದ ಜೆ. ಶ್ರೀನಿವಾಸ್ ಬೆಂಬಲ ಸೂಚಿಸಿದರೆ, ಸೋಲುಂಡ ನಾಗರತ್ನ ಪರ ಕಾಂಗ್ರೆಸ್ ಸದಸ್ಯರಾದ ವೈ.ವಿ.ಉಮಾಶಂಕರ್, ಮಹಾದೇವಚಿಕ್ಕರಂಗಯ್ಯ, ಶಾಸಕ ಎಸ್. ಜಯಣ್ಣ ಮತ ಬೆಂಬಲ ಸೂಚಿಸಿದರು.

ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಕೆ. ಚಂದ್ರಮೌಳಿ ನಿಂಗರಾಜು ಹಾಗೂ ಭೀಮಪ್ಪ ವಿಜಯಿಯಾಗಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದರು.

ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಯ ವಿರುದ್ಧವೇ ಇದೇ ಪಕ್ಷದ ಬ್ಬರು ಸದಸ್ಯರು ಮತ ಚಲಾಯಿಸಿ ಅಚ್ಚರಿ ಮೂಡಿಸಿದರೆ, ಬಿಜೆಪಿ ಪಕ್ಷದ ಸದಸ್ಯರು ಕಾಂಗ್ರೆಸ್ ನ ನಿಂಗರಾಜು ಪರ ಮತ ಚಲಾಯಿಸುವ ಮೂಲಕ ಪಂಚಾಯಿತಿ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದರು. ಕಾಂಗ್ರೆಸ್ ಪಕ್ಷದಲ್ಲೇ ಇಬ್ಬರು ಸ್ಪರ್ಧಿಗಳು ಚುನಾವಣೆಗೆ ನಿಲ್ಲುವ ಮೂಲಕ ಪಕ್ಷದಲ್ಲೇ ಒಡಕಿದೆ ಎಂಬುದನ್ನು ಸಾಬೀತು ಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ ಪಕ್ಷದ ಸದಸ್ಯರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸದಾಶಿವಮೂರ್ತಿ ವಿಪ್  ಜಾರಿಗೊಳಿಸಿದ್ದಾರೆ.

Leave a Reply

comments

Related Articles

error: