ದೇಶ

ತಿಂಡಿ ಕೊಡಿಸಿದ ಚಿಕ್ಕಪ್ಪನಿಂದಲೇ ಮಗುವಿನ ಮೇಲೆ ಅತ್ಯಾಚಾರ

ಪಾಟ್ನಾ,ಮಾ.05: ಮೂರು ವರ್ಷದ ಮಗುವನ್ನು ತನ್ನ ಚಿಕ್ಕಪ್ಪ ಅತ್ಯಾಚಾರವೆಸಗಿ ಸದ್ಯ ಬಾಲಕಿ ಸ್ಥಿತಿ ಗಂಭೀರವಾಗಿರುವ ಘಟನೆ ಬಿಹಾರದ ತಾಕುರ್ಗಂಜ್ ಪ್ರದೇಶದಲ್ಲಿ ನಡೆದಿದೆ.

ಹೋಳಿ ಹಬ್ಬ ಆಚರಣೆ ಸಂತ್ರಸ್ತೆಯ ತಂದೆಯ ಸಹೋದರ ಬಂದು ಬಾಲಕಿಗೆ ಹಬ್ಬದ ತಿಂಡಿ ಕೊಡಿಸುವ ನೆಪ ಹೇಳಿ ಕಟ್ಟಡವೊಂದಕ್ಕೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ. ಶುಕ್ರವಾರ ಮಧ್ಯಾಹ್ನ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿ ಬಳಿಕ ಕಾಣೆಯಾಗಿದ್ದಳು. ಆದರೆ ಸ್ವಲ್ಪ ಸಮಯದ ನಂತರ ನಿರ್ಮಾಣ ಹಂತದ ಮನೆಯೊಂದರಲ್ಲಿ ಪತ್ತೆಯಾಗಿದ್ದಾಳೆ.  ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ನಂತರ ಕಟ್ಟಡದಿಂದ ಹೊರಬರುವಾಗ ಆರೋಪಿ ಚಿಕ್ಕಪ್ಪನನ್ನು ಸ್ಥಳೀಯರ ಗುಂಪೊಂದು ಗಮನಿಸಿ ಆರೋಪಿಯನ್ನು ಪೊಲೀಸರಿಗೆ  ಒಪ್ಪಿಸಿದ್ದಾರೆ.

ಘಟನೆಯಿಂದ ಗಂಭೀರವಾಗಿದ್ದ ಬಾಲಕಿಯನ್ನ ಲಕ್ನೋದಲ್ಲಿರುವ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜ್‍ಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕವೂ ಬಾಲಕಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.  ಆರೋಪಿ ವಿರುದ್ಧ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ರಮೇಶ್ ಚಂದ್ರ ಯಾದವ್ ತಿಳಿಸಿದ್ದಾರೆ. (ವರದಿ: ಪಿ.ಎಸ್ )

Leave a Reply

comments

Related Articles

error: