ಮೈಸೂರು

ಆರೋಗ್ಯಯುತ ಆಹಾರ ಸೇವಿಸಿ : ಅಭಿಗ್ಯಾ ಆನಂದ

ನಮ್ಮ ಆರೋಗ್ಯವು ನಾವು ತೆಗೆದುಕೊಳ್ಳುವ ಆಹಾರವನ್ನು ಅವಲಂಬಿಸಿರುತ್ತದೆ. ಹಣ್ಣು, ತರಕಾರಿ, ಹಾಲು, ಕಬ್ಬಿನ ಹಾಲು, ಎಳನೀರುಗಳನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುತ್ತಿದ್ದರೆ ನಾವು ಆರೋಗ್ಯವಂತರಾಗಿರುತ್ತೇವೆ ಎಂದು ಜೆಎಸ್ ಎಸ್ ಸಂಸ್ಕೃತ ಶಾಲೆಯ ವಿದ್ಯಾರ್ಥಿ ಅಭಿಗ್ಯಾ ಆನಂದ ಹೇಳಿದರು.

ಜೆಎಸ್ ಎಸ್ ವಿಶ್ವವಿದ್ಯಾನಿಲಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಅಭಿಗ್ಯಾ ಆನಂದ ಮಾತನಾಡಿದರು.

ಜೆಎಸ್ ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಿವಮಲ್ಲು ವಿದ್ಯಾರ್ಥಿಗಳಿಗೆ ಆರೋಗ್ಯಯುತ ಆಹಾರ ಸೇವನೆಗೆ ಸಲಹೆ ನೀಡಿದರು. ಜೆಎಸ್.ಎಸ್ ಶಿಕ್ಷಣ ಸಂಸ್ಥೆಗಳ ಸಂಯೋಜಕ ಜಿ.ಎಲ್.ತ್ರಿಪುರಾಂತಕ, ಚಂದ್ರಮೌಳೇಶ್ವರ, ಕೆ.ಬಿ.ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: