ಮನರಂಜನೆ

ಮೋದಿಗೆ ಆಹ್ವಾನ ನೀಡಿದ ಯುವರಾಜ್‍ ಸಿಂಗ್‍

img-20161125-wa0010
ಆಮಂತ್ರಣ ಸ್ವೀಕಾರ.

ಮಾಡೆಲ್ ಹಾಗೂ ನಟಿ ಹಜೇಲ್ ಕೀಚ್‍ ಅವರನ್ನು ವರಿಸುತ್ತಿರುವ ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮದುವೆಗೆ ಆಹ್ವಾನಿದ್ದಾರೆ. ನ.24 ರಂದು ಸಂಸತ್‍ ಭವನಕ್ಕೆ ತೆರಳಿ ಮೋದಿಯವರಿಗೆ ಯುವರಾಜ್ ಆಮಂತ್ರಣ ಪತ್ರ ನೀಡಿದರು.

ನ.30 ರಂದು ಚಂಡೀಗಢದಲ್ಲಿ ಸಿಖ್ ಸಂಪ್ರದಾಯದಂತೆ ಮದುವೆ ನಡೆಯಲಿದ್ದು, ಡಿ.2 ರಂದು ಗೋವಾದಲ್ಲಿ ಹಿಂದೂ ಸಂಪ್ರದಾಯದಂತೆ ಸಮಾರಂಭ ನಡೆಯಲಿದೆ.

ಮೂಲಗಳ ಪ್ರಕಾರ ಈ ಭರ್ಜರಿ ಮದುವೆಗೆ 60 ಜನ ಅತಿಥಿಗಳಿಗಷ್ಟೇ ಆಹ್ವಾನ ನೀಡಿದ್ದು, ಕ್ರಿಕೆಟಿಗರು ಸಿನಿಮಾ ತಾರೆಯರು ಹಾಗೂ ಕೆಲವು ರಾಜಕಾರಣಿಗಳು ಮಾತ್ರ ಭಾಗವಹಿಸುವ ಸಾಧ್ಯತೆ ಇದೆ.

ಯುವರಾಜ್ ರನ್ನು ಕೈ ಹಿಡಿಯುತ್ತಿರುವ ಹಜೇಲ್ ಕೀಚ್‍ ಈ ಹಿಂದೆ ತಮಿಳಿನಿ ಬಿಲ್ಲಾ, ತೆಲುಗಿನ ‘ಕೃಷ್ಣ ವಂದೇ ಜಗದ್ಗುರುಂ’ ಚಿತ್ರದಲ್ಲಿ ನಟಿಸಿದ್ದರು. ಹಿಂದಿಯ ಬಿಗ್‍ಬಾಸ್‍ ಸೀಸನ್ 7ರಲ್ಲೂ ಕೂಡ ಭಾಗವಹಿಸಿದ್ದರು.

ತಾಯಿಯೊಂದಿಗೆ ಸಂಸತ್ ಭವನಕ್ಕೆ ಆಗಮಿಸಿದ ಯುವರಾಜ್ ಸಿಂಗ್.
ತಾಯಿಯೊಂದಿಗೆ ಸಂಸತ್ ಭವನಕ್ಕೆ ಆಗಮಿಸಿದ ಯುವರಾಜ್ ಸಿಂಗ್.

 

Leave a Reply

comments

Related Articles

error: