ಪ್ರಮುಖ ಸುದ್ದಿಮೈಸೂರು

ನಿಯಮಗಳನ್ನು ಗಾಳಿಗೆ ತೂರಿ ಎಲ್ಲೆಂದರಲ್ಲಿ ರಾರಾಜಿಸುತ್ತಿರುವ ಪೋಸ್ಟರ್‍ಗಳು

poster-4ಸ್ವಚ್ಛ ನಗರಿ ಎಂಬ ಕೀರ್ತಿಗೆ ಪಾತ್ರವಾದ ಮೈಸೂರಿನಲ್ಲಿ ಬಿಜೆಪಿ ಮುಖಂಡರೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಪೋಸ್ಟರ್‍ಗಳನ್ನು ಅಂಟಿಸಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಬಿಜೆಪಿಯು ದೇಶದೆಲ್ಲೆಡೆ ಸ್ವಚ್ಛ ಭಾರತ ಅಭಿಯಾನಗಳನ್ನು ನಡೆಸುತ್ತಿದ್ದು, ಮಾಜಿ ಸಚಿವ ರಾಮದಾಸ್ ಅಭಿಮಾನಿಗಳ ಬಳಗದಿಂದ ಬಿಜೆಪಿ ಮುಖಂಡ ಲಕ್ಷ್ಮಣ್ ಕುಮಾರ್‍ರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವ ಪೋಸ್ಟರ್‍ಗಳನ್ನು ವಾರ್ಡ್‍ ನಂ.21 ಮತ್ತು 22ರಲ್ಲಿ ಪೊಲೀಸ್ ಚೌಕಿ, ಕಾರ್ಪೊರೇಷನ್ ಹಾಕಿರುವ ನಾಮಫಲಕಗಳ ಮೇಲೆ ಅಂಟಿಸಲಾಗಿದೆ. ಪೊಲೀಸ್‍ ಚೌಕಿಗಳಲ್ಲಿರುವ ಸಂಚಾರಿ ನಿಯಮಗಳು ಕಾಣದ ರೀತಿಯಲ್ಲಿ ಅವುಗಳ ಮೇಲೆ ಈ ಪೋಸ್ಟರ್‍ಗಳನ್ನು ಅಂಟಿಸಲಾಗಿದೆ.

ಪೋಸ್ಟರ್‍ಗಳು ನಗರದ ಅಂದ ಕೆಡಿಸುತ್ತದೆ ಎಂದು ಗೊತ್ತಿದ್ದರೂ, ಬಿಜೆಪಿ ಪಕ್ಷದ ಕಾರ್ಯಕರ್ತರು ಈ ರೀತಿ ಮಾಡಿರುವುದು ಕೆಲ ಮುಖಂಡರ ಕಣ್ಣು ಕೆಂಪಗಾಗಿಸಿದೆ. ಈಗಾಗಲೇ ಸ್ಥಳಕ್ಕೆ ಆಗಮಿಸಿದ ಕಾರ್ಪೋರೇಷನ್‍ನವರು ಪೋಸ್ಟರ್‍ಗಳನ್ನು ತೆಗೆದುಹಾಕಿದ್ದಾರೆ. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು, ಶಾಸಕ ಎಂ.ಕೆ. ಸೋಮಶೇಖರ್ ಅವರಿಗೆ ಈ ಬಗ್ಗೆ ದೂರು ನೀಡಲಾಗಿದ್ದು, ಅವರು ಬೆಳಗಾವಿಯಲ್ಲಿರುವ ಕಾರಣ ತಮ್ಮ ಆಪ್ತ ಸಹಾಯಕ ರೇವಣ್ಣ ಅವರ ಮೂಲಕ ಕಾರ್ಪೋರೇಷನ್‍ಗೆ ದೂರು ಸಲ್ಲಿಸಿದ್ದಾರೆ.

poster-2

 

Leave a Reply

comments

Related Articles

error: