ಮೈಸೂರು

ಮಹಿಳಾ ದಿನಾಚರಣೆ : ಪ್ರಮಾಣ ಪತ್ರ ವಿತರಣೆ ಮಾ.7

ಮೈಸೂರು, ಮಾ.5 : ಗಾರ್ಡ್ ಸಂಸ್ಥೆ, ಮುಂಬೈ ಲಾರ್ಸನ್ ಅಂಡ್ ಟೂಬ್ರೋ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್  ಸಂಯುಕ್ತಾಶ್ರಯದಲ್ಲಿ ವಿವಿಧ ವೃತ್ತಿ ಕೌಶಲ್ಯ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಗಾರ್ಡ್ ಸಂಸ್ಥೆಯ 34ನೇ ವಾರ್ಷಿಕೋತ್ಸವವನ್ನು ಮಾ.7ರ ಬೆಳಗ್ಗೆ 11 ಕ್ಕೆ ಜಗನ್ಮೋಹನ್ ಅರಮನೆಯಲ್ಲಿ ಆಯೋಜಿಸಿದೆ.

ಎಲ್.ಅಂಡ್ ಟಿಯ ಬಿಜಿನೆಸ್ ಯೂನಿಟ್ ಹೆಡ್ ಅಮಿತ್ ಕುಮಾರ್, ಗಾರ್ಡ್ ಸಂಸ್ಥೆ ಡಾ.ಆರ್.ನಾಗರಾಜು ಅಧ್ಯಕ್ಷತೆ, ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಹೆಚ್.ರಾಮಕೃಷ್ಣೇಗೌಡ, ಮೈಸೂರು ವೈದ್ಯಕೀಯ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಡಾ.ಮಲ್ಲಿಕಾ ಬಿ ಇನ್ನಿತರ ಗಣ್ಯರು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: