
ದೇಶ
ಸೊಸೆ ಮೇಲೆ ಅತ್ಯಚಾರವೆಸಗಿದ ಅಪ್ಪನ ಕೊಲೆ ಮಾಡಿದ ಮಗ
ಲಕ್ನೋ,ಮಾ.05: ಮಗ ಕೆಲಸಕ್ಕೆಂದು ಹೋದ ವೇಳೆ ಸೊಸೆ ಮೇಲೆ ನಿರಂತರ ಎರಡು ದಿನ ಅತ್ಯಾಚಾರ ಎಸಗುತ್ತಿದ್ದ ಅಪ್ಪ ಮಗ ಮತ್ತು ಸೊಸೆ ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಶುಕ್ರವಾರ ಮಗ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾವ ಸೊಸೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಶನಿವಾರ ಕೂಡ ಮಗ ಕೆಲಸಕ್ಕೆ ಹೋದಾಗ ಈ ಕೃತ್ಯವನ್ನು ಮಾಡಿದ್ದಾನೆ. ಮೂರನೇ ದಿನ ಅಂದರೆ ಭಾನುವಾರ ತಂದೆ ತನ್ನ ಪತ್ನಿ ಮೇಲೆ ದೌರ್ಜನ್ಯ ನಡೆಸಿರೋದನ್ನು ಮಗ ಕಣ್ಣಾರೆ ನೋಡಿದ್ದಾರೆ. ತಂದೆಯ ಹೀನ ಕೃತ್ಯವನ್ನು ನೋಡಿ ಕೋಪಗೊಂಡ ಮಗ ಮತ್ತು ಸೊಸೆ ಇಬ್ಬರೂ ಸೇರಿ ಕೋಲಿನಿಂದ ಥಳಿಸಿದ್ದಾರೆ. ಏಟು ತಾಳಲಾರದೇ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೃತನ ಹಿರಿಯ ಮಗ ಪೊಲೀಸರಿಗೆ ಭಾನುವಾರ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿತ್ತು. ಆದರೆ ದಂಪತಿ ಕೊಲೆ ಮಾಡಿದ ನಂತರ ಪೊಲೀಸರಿಗೆ ಶರಣಾಗಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಉತ್ತರಪ್ರದೇಶದ ಫಿಲಿಬಿಟ್ ಮಾಧೋತಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಶನಿವಾರ ನಡೆದಿದೆ. (ವರದಿ; ಪಿ.ಎಸ್ )