ಮನರಂಜನೆಮೈಸೂರು

ಹಾಸ್ಯಪ್ರಧಾನ ‘ಪುರಹರ’ ನಾಟಕ ಪ್ರದರ್ಶನ ನ.27ರಂದು

ಆಯಾಮ ರಂಗ ತಂಡದಿಂದ ಕರಣಂ ಪವನ್ ವಿರಚಿತ ಹಾಸ್ಯಪ್ರಧಾನ “ಪುರಹರ” ನಾಟಕವನ್ನು ಪ್ರದರ್ಶಿಸಲಾಗುತ್ತಿದೆ ಎಂದು ಶ್ರೀಧರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶುಕ್ರವಾರ ಪತ್ರಕರ್ತರ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಟಕವನ್ನು ನ.27ರ ಭಾನುವಾರ ಸಂಜೆ 7ಕ್ಕೆ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಸಾಂಪ್ರದಾಯಶಾಹಿ ಬ್ರಾಹ್ಮಣರ ಒಳಪಂಗಡಗಳಲ್ಲಿರುವ  ವೈಮನಸ್ಸು – ಭಿನ್ನತೆಯೇ ನಾಟಕದ ಕಥಾ ವಸ್ತುವಾಗಿದ್ದು ಐತಿಹಾಸಿಕ ಗಂಭೀರ ವಿಷಯವನ್ನು ಹಾಸ್ಯ ಲೇಪದೊಂದಿಗೆ ಪ್ರಸ್ತುತಪಡಿಸಲಾಗುವುದು ಎಂದು ನಿರ್ದೇಶಕ ನಾಗಾರ್ಜುನ ತಿಳಿಸಿದರು.

ಸಾಮ್ರಾಟ್ ಆದಿಲ್‍ಶಾಹಿಯೂ ಮಂದಿರಗಳನ್ನು ದ್ವಂಸಗೊಳಿಸು ಎನ್ನುವ ಆದೇಶವನ್ನು ಹೇಗೆ ವಿಫಲಗೊಳಿಸಲಾಯಿತು ಎನ್ನುವುದನ್ನು ನಾಟಕದಲ್ಲಿ ಮೂಡುವ ರಂಗಪಾತ್ರಗಳು ಹಾಸ್ಯದ ನವಿರಾದ ಎಳೆಯಲ್ಲಿ ಬಿತ್ತರಿಸುವವು ಎಂದು ನಾಟಕದ ನಾಯಕನಟ ಶ್ರೀನಿಧಿ ವಾದಿರಾಜ ತಿಳಿಸಿದರು.

Leave a Reply

comments

Related Articles

error: