ಸುದ್ದಿ ಸಂಕ್ಷಿಪ್ತ

ಮಾ.11ರಂದು ಡಾ.ಬನ್ನಂಜೆ ಗೋವಿಂದಾಚಾರ್ಯರಿಗೆ ‘ಶಾಸ್ತ್ರ ವಿದ್ಯಾ ನಿಧಿ’ ಬಿರುದು

ಮೈಸೂರು,ಮಾ.5 : ನಗರದ ವೇದಶಾಸ್ತ್ರ ಪೋಷಿಣೀ ಸಭಾದಿಂದ ವೇದಶಾಸ್ತ್ರ ವಿದ್ವಾಂಸರ ಸನ್ಮಾನ ಕಾರ್ಯಕ್ರಮವನ್ನು ಮಾ.11ರಂದು ಸಂಜೆ 4.30ಕ್ಕೆ ಆಯೋಜಿಸಿದ್ದು ಪ್ರಸಕ್ತ ಸಾಲಿನಲ್ಲಿ ಪದ್ಮಶ್ರಿ ಡಾ.ಬನ್ನಂಜೆ ಗೋವಿಂದಾಚಾರ್ಯ ಅವರಿಗೆ ಶಾಸ್ತ್ರ ವಿದ್ಯಾ ನಿಧಿ ಬಿರುದು ನೀಡಿ ಸನ್ಮಾನಿಸಲಾಗುವುದು..

ಕಳೆದ ಹಲವಾರು ವರ್ಷಗಳಿಂದ ವೇದ-ಶಾಸ್ತ್ರ-ಆಗಮ ಹಾಗೂ ಭಾರತೀಯ ಸಂಸ್ಕೃತಿ ಪರಂಪರೆಗಳ ರಕ್ಷಣೆ ಪ್ರಚಾರ ಪ್ರಸಾರದಲ್ಲಿ ತೊಡಗಿಕೊಂಡಿರುವ ವಿದ್ವಾಂಸರನ್ನು ಸನ್ಮಾನಿಸಲಾಗುತ್ತಿದೆ. ಇದರಂತೆ ಪ್ರಸಕ್ತ ಸಾಲಿನಲ್ಲಿ ಕುವೆಂಪುನಗರದ ಗಾನಭಾರತಿಯಲ್ಲಿ ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರಿಗೆ ‘ಶಾಸ್ತ್ರ ವಿದ್ಯಾ ನಿಧಿ’ ಬಿರುದು ಹಾಗೂ 30 ಸಾವಿರ ಗೌರವ ಧನ ನೀಡಿ ಸನ್ಮಾನಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

Check Also

Close
error: