ಮೈಸೂರು

‘ಟಿಪ್ಪುಸುಲ್ತಾನ್ – ಒಂದು ವಿವೇಚನೆ’ ವಿಚಾರ ಸಂಕಿರಣ ನ.27ರಂದು

ಮೈಸೂರಿನ ಕರ್ನಾಟಕ ದಲಿತ ವೆಲ್ಫೇರ್ ಟ್ರಸ್ಟ್ ನ.27ರಂದು “ಟಿಪ್ಪು ಸುಲ್ತಾನ್ – ಒಂದು ವಿವೇಚನೆ” ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ ಎಂದು ಟ್ರಸ್ಟ್ ಅಧ್ಯಕ್ಷ ಶಾಂತರಾಜು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು, ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಚಾರ ಸಂಕಿರಣವನ್ನು ನ.27ರ ಭಾನುವಾರ ಬೆಳಗ್ಗೆ 11 ಗಂಟೆಗೆ ಹೋಟೆಲ್ ನಳಪಾಡ್‍ ಅಲ್ಲಿ ಆಯೋಜಿಸಲಾಗಿದ್ದು ಸಾಹಿತಿ, ವಿಚಾರವಾದಿ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಉದ್ಘಾಟಿಸುವರ. ಮುಖ್ಯ ಭಾಷಣಕಾರರಾಗಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮೈಸೂರು ಮೆಡಿಕಲ್ ಕಾಲೇಜಿನ ಡಾ.ಚಂದ್ರಕುಮಾರ್ ಭಾಗವಹಿಸುವರು. ಚಿಂತಕ ಪ್ರೊ.ಸಬೀರ್ ಮುಸ್ತಾಫಾ ಅಧ್ಯಕ್ಷತೆ ವಹಿಸುವರು.
ಅಂದು ಮಧ್ಯಾಹ್ನ ನಡೆಯುವ ‘ಟಿಪ್ಪುಸುಲ್ತಾನ್ – ಮತಾಂಧನೆ?’ ವಿಚಾರಗೋಷ್ಠಿಯಲ್ಲಿ ವಿಚಾರವಾದಿ ಮಾಯಿಗೌಡ, ವಾರ್ತಾಭಾರತಿ ಸಂಪಾದಕ ಎಂ.ಬಷೀರ್ ಹಾಗೂ ಸಾಹಿತಿ ಬನ್ನೂರು ಕೆ.ರಾಜು ವಿಷಯ ಮಂಡಿಸುವರು. ಪ್ರೊ.ಮಹೇಶ್ ಚಂದ್ರಗುರು ಅಧ್ಯಕ್ಷತೆ ವಹಿಸುವರು. ನಂತರ “ಟಿಪ್ಪುಸುಲ್ತಾನ್ – ಪ್ರಜಾಪ್ರಭುತ್ವವಾದಿಯೇ?’ ವಿಷಯವಾಗಿ ಹಿರಿಯ ಪತ್ರಕರ್ತ ಬಿ.ಎಂ.ಅನೀಫ್, ಮೈಸೂರು ವಿವಿಯ ಪ್ರೊ.ಆನಂದ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡುವರು. ಪ್ರೊ.ಟಿ.ಎಂ.ಮಹೇಶ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಎಂ.ಮಹದೇವಮೂರ್ತಿ, ಗೋವಿಂದರಾಜು ಉಪಸ್ಥಿತರಿದ್ದರು.

Leave a Reply

comments

Related Articles

error: