
ಮನರಂಜನೆ
‘ಕಾಣದಂತೆ ಮಾಯವಾದನು’ ಚಿತ್ರದಲ್ಲಿ ಉದಯ್ ಘರ್ಜನೆ
ದುರಂತ ಸಾವಿಗೀಡಾದ ಖಳನಟ ಉದಯ್ ‘ಕಾಣದಂತೆ ಮಾಯವಾದನು’ ಚಿತ್ರದ ಟೀಸರ್`ನಲ್ಲಿ ಘರ್ಜಿಸಿದ್ದಾರೆ. ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ದುರಂತ ಸಾವು ಕಂಡ ಉದಯ್, ಇದೀಗ ಬಿಡುಗಡೆಯಾಗಿರುವ 50 ಸೆಕೆಂಡಿನ ಒಂದು ಟೀಸರ್`ನಲ್ಲಿ ಜನರ ಮನ್ನಣೆಗೆ ಪಾತ್ರಾಗಿದ್ದಾರೆ.
ಉದಯ್, ಕಾಣದಂತೆ ಮಾಯವಾದನು ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದರು. ಈ ಚಿತ್ರದ ಮೊದಲ ಹಂತದ ಚಿತ್ರೀಕರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಉದಯ್, ದ್ವೀತೀಯ ಹಂತದ ಚಿತ್ರೀಕರಣಕ್ಕೂ ಮೊದಲು ದುರಂತ ಸಾವು ಕಂಡರು.
ಈ ನಟನಿಗೆ ಕೃತಜ್ಞತೆ ಅರ್ಪಿಸುವ ನಿಟ್ಟಿನಲ್ಲಿ ‘ಕಾಣದಂತೆ ಮಾಯವಾದನು’ ಚಿತ್ರತಂಡ, 50 ಸೆಂಕೆಂಡಿನ ಒಂದು ಟೀಸರ್ ಅನ್ನು ಸಾಮಾಜಿಕ ತಾಣದಲ್ಲಿ ರಿಲೀಸ್ ಮಾಡಿದೆ. ರಿಲೀಸ್ ಆದ ಅರ್ಧ ದಿನದಲ್ಲೇ ಹತ್ತು ಸಾವಿರಕ್ಕೂ ಹೆಚ್ಚು ವ್ಯೂವ್ಸ್ ಕಂಡು ಜನರಿಂದ ಪ್ರಶಂಸೆಗೂ ಪಾತ್ರವಾಗಿದೆ. ಯೋಜರಾಜ್ ಭಟ್ರ ಶಿಷ್ಯ ರಾಜ್ ಪತಿಪಟಿ ಅವರು ನಿರ್ದೇಶನ ಮಾಡಿರುವ ಚಿತ್ರವನ್ನು ಚಂದ್ರಶೇಖರ್ ನಾಯ್ದು ನಿರ್ಮಿಸುತ್ತಿದ್ದಾರೆ.
ಉದಯ್ ಇಲ್ಲವಾದ ಕಾರಣ ಅವರ ಪಾತ್ರವನ್ನು ಚಿತ್ರದಲ್ಲಿ ಹೇಗೆ ಹೊಂದಾಣಿಕೆ ಮಾಡಬಹುದು ಎಂಬುದು ಸದ್ಯದ ಕುತೂಹಲ.