ಮನರಂಜನೆ

ಹಲವು ವಿಶೇಷತೆಗಳ ದ್ವಾರಕೀಶ್ ನಿರ್ಮಾಣದ “ಚೌಕ”

ಹಿರಿಯ ನಟ ದ್ವಾರಕೀಶ್ ನಿರ್ಮಾಣ ಸಂಸ್ಥೆಯ 50ನೇ ಚಿತ್ರವಾದ “ಚೌಕ” ಚಿತ್ರದ ಹೊಸ ಪೋಸ್ಟರ್‍ ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಕನ್ನಡದಲ್ಲಿ ಪ್ರಥಮ ಪ್ರಯೋಗವೆಂಬಂತೆ ಕಾಣುತ್ತಿರುವ ಈ ಚಿತ್ರದಲ್ಲಿ ನಾಲ್ವರು ನಟರು ಮತ್ತು ನಾಲ್ವರು ನಟಿಯರು, ಐವರು ಸಂಗೀತ ನಿರ್ದೇಶಕರು, ಐವರು ಛಾಯಾಗ್ರಾಹಕರು ಹಾಗೂ ಐವರು ಸಾಹಿತಿಗಳು ಕೆಲಸ ನಿರ್ವಹಿಸುತ್ತಿದ್ದಾರೆ.

ನಾಯಕ ನಟರಾಗಿ ‘ನೆನಪಿರಲಿ’ ಖ್ಯಾತಿಯ ಪ್ರೇಮ್‍, ದಿಗಂತ್‍, ವಿಜಯ ರಾಘವೇಂದ್ರ, ಪ್ರಜ್ವಲ್ ದೇವರಾಜ್‍, ನಟಿಯರಾಗಿ ದೀಪಾ ಸನ್ನಿಧಿ, ಪ್ರಿಯಾಮಣಿ, ಭಾವನ ಮೆನನ್ ಹಾಗೂ ಐಂದ್ರಿತ ರೈ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಮೂಲಕ ‘ತರುಣ್ ಸುಧೀರ್‍’ ನಿರ್ದೇಶಕರಾಗುತ್ತಿದ್ದಾರೆ. ‘ದರ್ಶನ್’ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಚಿತ್ರತಂಡದ ಮೂಲಗಳು ತಿಳಿಸಿವೆ.

fb_img_1480061910575

Leave a Reply

comments

Related Articles

error: