ಸುದ್ದಿ ಸಂಕ್ಷಿಪ್ತ

ಅಂತಾರಾಷ್ಟ್ರೀಯ ಸಮ್ಮೇಳನ ಪ್ರಯುಕ್ತ ಕಾರ್ಯಾಗಾರ

ಮೈಸೂರು ಮಾ.7:-  ಭಾರತೀಯ ಭಾಷಾ ಸಂಸ್ಥಾನದ ವತಿಯಿಂದ ಮಾರ್ಚ್ 7 ರಿಂದ 9 ರವರೆಗೆ ಅನುವಾದದ ಬಗ್ಗೆ ಸಮಾಜ ಜ್ಞಾನ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಕಾರ್ಯಾಗಾರವನ್ನು ಹುಣಸೂರು ರಸ್ತೆಯಲ್ಲಿರುವ ಭಾರತೀಯ ಭಾಷಾ ಸಂಸ್ಥಾನದ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 7 ರಂದು ಹೈದರಾಬಾದ್ ವಿಶ್ವವಿದ್ಯಾನಿಲಯದ ಪ್ರೊ. ಪಂಚನಾನ್ ಮೊಹಾಂತಿ, ಮಾರ್ಚ್ 8 ರಂದು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಪ್ರೊ. ಅಲಿಯಾನ್ ಡಿಸೋಲರ್ಸ್ ಹಾಗೂ ಮಾರ್ಚ್ 9ರಂದು ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ ಪ್ರೊ. ಸುಶಾಂತ್ ಕುಮಾರ್ ಮಿಶ್ರ ಕಾರ್ಯಗಾರದಲ್ಲಿ ಭಾಗವಹಿಸಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: