ಸುದ್ದಿ ಸಂಕ್ಷಿಪ್ತ

ಅಪರಿಚಿತ ವ್ಯಕ್ತಿಯ ಶವ : ವಾರಸುದಾರರ ಪತ್ತೆಗಾಗಿ ಮನವಿ

ಮೈಸೂರು ಮಾ.7:- ಮೈಸೂರು ರೈಲು ನಿಲ್ದಾಣದ ವೇದಿಕೆ ನಂ.6ರ ಬಳಿ ಎಲ್‍ಐಸಿ ಕಟ್ಟಡದ ಹತ್ತಿರ ಸುಮಾರು  50 ವರ್ಷದ ಅಪರಿಚಿತ ವ್ಯಕ್ತಿಯ ಶವ ಮೈಸೂರು ರೈಲ್ವೆ ಪೊಲೀಸರಿಗೆ ದೊರಕಿದ್ದು ಮೃತ ದೇಹವನ್ನು ಕೆ.ಆರ್.ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.
ಅಪರಿಚಿತ ವ್ಯಕ್ತಿಯ ಗುರುತು, ಎತ್ತರ 5.6 ಅಡಿ, ಕೋಲು ಮುಖ, ಸಾದಾರಣ ಕಪ್ಪು ಮೈಬಣ್ಣ, ಸಾದಾರಣ ಶರೀರ, ಉದ್ದನೆಯ ಮೂಗು, ತಲೆಯಲ್ಲಿ ಕಪ್ಪು ಬಿಳಿ ಮಿಶ್ರಿತ ಕೂದಲು, ಮುಖದಲ್ಲಿ 1/2 ಇಂಚು ಮಿಶ್ರಿತ ಗಡ್ಡ-ಮೀಸೆ ಬಿಟ್ಟಿರುತ್ತಾರೆ. ಮತ್ತು ಮಾಸಲು ಸಿಮೆಂಟ್ ಬಣ್ಣದ ಲಾಡಿ ನಿಕ್ಕರ್ ಧರಿಸಿರುತ್ತಾರೆ.
ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579 ಯನ್ನು ಸಂಪರ್ಕಿಸಲು ಕೋರಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: