ಮೈಸೂರು

ವಿವೇಕ ಸ್ಪಂದನ ಅಭಿಯಾನ: ಗೌರವ ಸಮರ್ಪಣೆ ನ.27ರಂದು

ಶ್ರೀರಾಮಕೃಷ್ಣ ಸೇವಾ ಸಂಘದ ವಿವೇಕ ಸ್ಪಂದನದಿಂದ ಅಭಿಯಾನ ಹಾಗೂ ಗೌರವ ಸಮರ್ಪಣಾ ಸಮಾರಂಭವನ್ನು ಆಯೋಜಿಸಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಡಿ. ಮಾದೇಗೌಡ ತಿಳಿಸಿದರು.

ಅವರು, ಶುಕ್ರವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿ ನ.27ರ ಭಾನುವಾರ ಸಂಜೆ 5 ಗಂಟೆಗೆ ದಿವಾನ್ ರಂಗಾಚಾರ್ಲು ಪುರಭವನದಲ್ಲಿ ವಿವೇಕ ಸ್ಪಂದನ ಅಭಿಯಾನದ ಉದ್ಘಾಟನೆ ಹಾಗೂ ಈಚೆಗೆ ಮೈಸೂರಿನಿಂದ ಮುಂಬೈ ರಾಮಕೃಷ್ಣ ಮಠದ ನಿಯೋಜನೆಗೊಂಡ ವರ್ಗವಾದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್‍ ಅವರಿಗೆ ಗೌರವ ಸಮರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.  ಸಮಾರಂಭವನ್ನು ಸುತ್ತೂರು ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿ ಆಶೀವರ್ಚನ ನೀಡುವರು. ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಶ್ರೀರಾಮಕೃಷ್ಣ ಆಶ್ರಮd ಅಧ್ಯಕ್ಷ ಸ್ವಾಮಿ ಆತ್ಮಜ್ಞಾನಂದಜೀ ಮಹಾರಾಜ್ ಸಾನಿಧ್ಯ ವಹಿಸುವರು.

ವಿಚಾರ ಗೋಷ್ಠಿ : ಸ್ವಾಮಿ ವಿವೇಕಾನಂದರ ಚಿಂತನೆಗಳ ಅರಿವನ್ನು ಮೂಡಿಸಲು ಚಿಂತನ, ಮಂಥನ, ಅನುಷ್ಠಾನಕ್ಕಾಗಿ ಸಂಘಟನೆ ವಿಚಾರ ಗೋಷ್ಠಿ ನಡೆಯಲಿದೆ.

ಶ್ರದ್ಧಾ ಕೇಂದ್ರಗಳಾಗಲಿ :  ದೇವಾಲಯಗಳು, ಮಸೀದಿಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿದ್ದು ಅವುಗಳು ಜ್ಞಾನಪ್ರಸಾರ, ಶ್ರದ್ಧಾ ಮತ್ತು ಸೇವಾ ಕೇಂದ್ರಗಳಾಗಿ ಮಾರ್ಪಡಾಗಿ ಶ್ರೀಸಾಮಾನ್ಯರಿಗೆ ಸಾಂತ್ವನ ಹಾಗೂ ವಿಶ್ವಾಸ ತುಂಬುವ ನೆಲೆಗಳಾಗಬೇಕು. ದೀನ ದೇವೋ ಭವ, ಅಜ್ಞಾನಿ ದೇವೋ ಭವ, ಸ್ವಾಮಿ ವಿವೇಕಾನಂದರ ಉಪದೇಶದಂತೆ ವಂಚಿತರಿಗೆ ಶೋಷಿತರ ಏಳ್ಗೆಗೆ ಪ್ರಾಮಾಣಿಕವಾಗಿ ಶ್ರಮಿಸಿ ಅನ್ನ, ಬಟ್ಟೆ, ಮನೆ, ಶಿಕ್ಷಣ ಮತ್ತು ಆರೋಗ್ಯವನ್ನು ಕಲ್ಪಿಸುವುದು.  ಅದರಂತೆ  “ವಿವೇಕ ಸ್ಪಂದನ – ಮನೆ ಮನೆಗೆ; ವಿವೇಕಾನಂದ- ಮನ ಮನಕ್ಕೆ” ವಿವೇಕಾನಂದ ಕಾರ್ಯಕ್ರಮವನ್ನು ಆಯೋಜಿಸಿ ಮೈಸೂರಿನ ಪ್ರತಿ ಬಡಾವಣೆಯಲ್ಲಿ ಶ್ರದ್ಧಾ ಕೇಂದ್ರಗಳನ್ನು ಆರಂಭಿಸಲಾಗುವುದು ಇದಕ್ಕೆ ಸಾರ್ವಜನಿಕರು ಕೈಜೋಡಿಸಲಿ ಎಂದು ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ನಗರಪಾಲಿಕೆ ಸದಸ್ಯರಾದ ನಾಗಭೂಷಣ್, ಪ್ರಶಾಂತ್ ಗೌಡ, ಜನಮನ ರಂಗದ ಸಿ.ಪಿ. ತಮ್ಮಣ್ಣ ಹಾಗೂ ಶ್ರೀರಾಮಕೃಷ್ಣಾಶ್ರಮದ ಚಕ್ರವರ್ತಿ ಉಪಸ್ಥಿತರಿದ್ದರು.

Leave a Reply

comments

Related Articles

error: