ಕರ್ನಾಟಕಪ್ರಮುಖ ಸುದ್ದಿ

ಹಾಸನ: ಮಾ.12ರಂದು ‘ಭವಿಷ್ಯ ನಿಧಿ ನಿಮ್ಮ ಹತ್ತಿರ’ ಕಾರ್ಯಕ್ರಮ

ಹಾಸನ (ಮಾ.7): ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತರು ಮಾ.12 ರಂದು ನಿಧಿ ಆಪ್ಕೆ ನಿಕಟ್/ಭವಿಷಯ ನಿಧಿ ನಿಮ್ಮ ಹತ್ತಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.

ಭವಿಷ್ಯನಿಧಿ ಉದ್ಯೋಗದಾತರು, ಸದಸ್ಯರು ಮತ್ತು ಪಿಂಚಣೆದಾರರು ತಮ್ಮ ದೂರುಗಳೇನಾದರೂ ಇದ್ದಲಿ ತಮ್ಮು ಅರ್ಜಿಯನ್ನು ಮಾ.7 ರಂದು ನೋಂದಾಯಿಸಿಕೊಳ್ಳಲು ಕೋರಿದ್ದಾರೆ. ಎಲ್ಲಾ ದೂರುಗಳನ್ನು ಅದೇ ದಿನ ಇತ್ಯರ್ಥ ಪಡಿಸಲು ಶ್ರಮ ವಹಿಸಲಾಗುತ್ತದೆ. ನಿಗದಿತ ದಿನಾಂಕದಂದು ದಾಕಲಾತಿಗಳೊಂದಿಗೆ ಅರ್ಜಿದಾರರು ಕೆಳಗೆ ತಿಳಿಸಿದ ಸಮಯದಲ್ಲಿ ಖುದ್ದಾಗಿ ಭಾಗವಹಿಸಿ ದೂರುಗಳನ್ನು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಜಿಲ್ಲಾ ಕಚೇರಿ ಕೆ.ಆರ್ ಪುರಂ ಹಾಸನದಲ್ಲೂ ಸಲ್ಲಿಸಬಹುದಾಗಿದೆ.

ಸದಸ್ಯರು ಹಾಗೂ ಉದ್ಯೋಗದಾತರು www.epfigms.gov.in ಇಲ್ಲಿ ತಮ್ಮ ದೂರುಗಳನ್ನು ನೋಂದಾಯಿಸಬಹುದು. ನೋಂದಾಯಿಸಿದ ದೂರುಗಳನ್ನು 15 ದಿನಗಳೊಳಗೆ ಇತ್ಯರ್ಥ ಮಾಡಿಕೊಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕ ಸೇವಾ ಕೇಂದ್ರವನ್ನು, ದೂ.08262-234106, ಪ್ಯಾಕ್ಸ್: 08262-237426, ಅಥವಾ ಇ-ಮೇಲ್ [email protected] ಅನ್ನು ಸಂಪರ್ಕಿಸಬಹುದು ಎಂದು ಸಹಾಯಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ. (ಎನ್‍.ಬಿ)

Leave a Reply

comments

Related Articles

error: