ಮೈಸೂರು

‘ಫಾರೆನ್ಸಿಕ್ ವಿತ್ ಲಾ ಇಸ್ ನೆವರ್ ಎ ಫ್ಲಾ’ : ರಾಷ್ಟ್ರೀಯ ವಿಚಾರ ಸಂಕಿರಣ

ಮೈಸೂರು,ಮಾ.7 : ಮಹಾರಾಜ ಕಾಲೇಜಿನ ಸ್ನಾತಕೋತ್ತರ ಅಪರಾಧಶಾಸ್ತ್ರ ಮತ್ತು ನ್ಯಾಯವಿಜ್ಞಾನ ವಿಭಾಗ ಹಾಗೂ ಬೆಂಗಳೂರಿನ ಕ್ಲ್ಯೂ 4 ಎವಿಡೆನ್ಸ್ ವತಿಯಿಂದ ದಕ್ಷಿಣ ಭಾರತದ ಪ್ರಪ್ರಥಮ ‘ಫಾರೆನ್ಸಿಕ್ ವಿತ್ ಇಸ್ ನೆವರ್ ಎ ಫ್ಲಾ’ ವಿಷಯವಾಗಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜ ಮೂರ್ತಿ ತಿಳಿಸಿದರು.

ವಿಧಿ ವಿಜ್ಞಾನ ತಂತ್ರಜ್ಞಾನದ ಬಗ್ಗೆ ನ್ಯಾಯವಾದಿಗಳಿಗೂ ಅರಿವಿರಬೇಕು, ಅದರಂತೆ ಕಾನೂನಿನ ಬಗ್ಗೆ ವಿಧಿ ವಿಜ್ಞಾನ ತಂತ್ರಜ್ಞರಿಗೂ ಅರಿವಿದ್ದರೆ ಮಾತ್ರ ಸಾರ್ವಜನಿಕರಿಗೆ ಸಮ್ಮತ ನ್ಯಾಯ ಒದಗಿಸಲು ಸಾಧ್ಯ, ಕಾನೂನು ಮತ್ತು ಅಪರಾಧಶಾಸ್ತ್ರ ಒಟ್ಟಿಗೆ ಕಾರ್ಯನಿರ್ವಹಿಸಬೇಕಾದ ಅವಶ್ಯವಿದ್ದು ಈ ನಿಟ್ಟಿನಲ್ಲಿ ವಿಚಾರ ವಿನಿಮಯಕ್ಕೆ ಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾ.9 ಮತ್ತು 10ರಂದು ನಡೆಯುವ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನೆಯು, ಮಾ.9ರ ಬೆಳಗ್ಗೆ 9.30ಕ್ಕೆ .ಶತಮಾನೋತ್ಸವ ಭವನದಲ್ಲಿ  ನಡೆಯಲಿದ್ದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಡಾ.ಎಸ್.ಸಾವಿತ್ರಿ ಪ್ರಸ್ತಾವಿಕವಾಗಿ ಮಾತನಾಡುವರು. ನಂತರ ಎರಡು ದಿನಗಳ ಕಾಲ ನಡೆಯುವ ವಿವಿಧ ಗೋಷ್ಠಿಗಳಲ್ಲಿ ನಿವೃತ್ತ ಲೋಕಾಯುಕ್ತ ಕುಣಿಗಲ್ ಶ್ರೀಕಾಂತ್, ನವದೆಹಲಿಯ ಡಾ.ರಂಜೀತ್ ಸಿಂಗ್, ಬೆಂಗಳೂರಿನ ಕ್ಲ್ಯೂ 4 ಎವಿಡೆನ್ಸ್ ನ ಬಿ.ಎನ್.ಪಣೀಂದ್ರ ಭಾಗಿಯಾಗಿ ವಿಷಯ ಮಂಡಿಸುವರು.

ಮಹಾರಾಷ್ಟ್ರ, ಉತ್ತರ ಪ್ರದೇಶ, ಹೈದ್ರಾಬಾದ್, ದೆಹಲಿ ರಾಜ್ಯಗಳ ವಿದ್ಯಾರ್ಥಿಗಳು, ಸಂಶೋಧಕರು, ವೈಜ್ಞಾನಿಕ ಅಧಿಕಾರಿಗಳು, ಶಿಕ್ಷಣ ತಜ್ಞರು, ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರು ಸೇರಿದಂತೆ ಮೂರು ನೂರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವರು 1,500 ಇತರರಿಗೆ ಹಾಗೂ ವಿದ್ಯಾರ್ಥಿಗಳಿಗೆ 2 ನೂರು ರೂ.ಗಳ ಪ್ರವೇಶ ಶುಲ್ಕವಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪಣೀಂದ್ರ, ಮಹಾರಾಜ ಕಾಲೇಜಿನ ಆಡಳಿತಾಧಿಕಾರಿ ರಾಮಸ್ವಾಮಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: