ಮೈಸೂರು

ನಟನೆ : ನೂತನ ಸರ್ಟಿಫಿಕೇಟ್ ಕೋರ್ಸ್ ಗಳು ಆರಂಭ

ಮೈಸೂರು,ಮಾ.7 : ನಗರದ  ಅಲ್ಲಮಪ್ರಭು ಲಲಿತಕಲಾ ಅಕಾಡಮಿಯು ನೂತನವಾಗಿ ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಅನ್ ಲೈನ್ ಹಾಗೂ ಮುಖಾಮುಖಿ ಪದ್ಧತಿಯಲ್ಲಿ ಪರಿಚಯಿಸಲಾಗುತ್ತಿದೆ ಎಂದು ಅಕಾಡಮಿ ಡೀನ್ ಡಿ.ಎ.ಉಪಾಧ್ಯ ತಿಳಿಸಿದರು.

ರಂಗ ಕಲೆಯಲ್ಲಿ ಪ್ರಾಚೀನ ಪದ್ಧತಿ ಹೊರತಾಗಿ ನೂತನವಾಗಿ ಅನ್ವಯಿಕ ಅಭಿನಯ, ಅನ್ವಯಿಕ ಚಿತ್ರಕಲೆ, ಕಲಾಸ್ವಾದನ ತರಬೇತಿ ಕೋರ್ಸ್ ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ತರಗತಿಗಳನ್ನು ನಡೆಸುತ್ತಿದ್ದು, ಈಗಾಗಲೇ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ  ಆಧ್ಯತೆ ಮೇರೆಗೆ ಶಾಲೆಗಳನ್ನು ಸಂಜೆ ವೇಳೆ ನಡೆಸಲಾಗುವುದು. ಮಾ.20ರೊಳಗೆ ಪ್ರವೇಶ ಪಡೆಯಬಹುದಾಗಿದೆ. ಮಾಹಿತಿಗಾಗಿ ಮೊ.ನಂ.9980657709, 9900349093, 9740945390 ಅನ್ನು ಸಂಪರ್ಕಿಸಬಹುದು ಎಂದು ಕೋರಿದರು. ಹಿರಿಯ ರಂಗಕರ್ಮಿ ನಾ.ಶ್ರೀನಿವಾಸ್ ಇದ್ದರು.  (ವರದಿ : ಕೆ.ಎಂ.ಆರ್).

Leave a Reply

comments

Related Articles

error: