ಕ್ರೀಡೆದೇಶ

ಕ್ರಿಕೆಟಿಗ ಮುಹಮ್ಮದ್ ಶಮಿ ವಿರುದ್ಧ ಕಿರುಕುಳ ಆರೋಪ

ಹೊಸದಿಲ್ಲಿ, ಮಾ.7: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ  ವಿರುದ್ಧ ಕಿರುಕುಳ ಆರೋಪಿಸಿ ತನ್ನನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು  ಪತ್ನಿ  ಆರೋಪಿಸಿದ್ದಾರೆ.

ಶಮಿ  ಪತ್ನಿ ಹಸಿನ್ ಜಹಾನ್ ತನ್ನ ಪತಿಯ ವಿರುದ್ಧ ಕಿರುಕುಳ ಆರೋಪಿಸಿ ಶಮಿಗೆ ವಿವಾಹೇತರ ಸಂಬಂಧಗಳಲ್ಲದೆ ಶಮಿ ಹಲವು ಮಹಿಳೆಯರೊಂದಿಗೆ ವ್ಯಾಟ್ಸ್‌ಆಯಪ್ ಹಾಗೂ ಫೇಸ್ಬುಕ್ ಮೆಸೆಂಜರ್ನಲ್ಲಿ ನಡೆಸಿರುವ ಸಂಭಾಷಣೆಯ ಸ್ಕ್ರೀನ್ಶಾಟ್ನ್ನು ಜಹಾನ್ ತನ್ನ ಫೇಸ್ಬುಕ್ನಲ್ಲಿ ಹಾಕಿದ್ದಾರೆ. ಶಮಿಯೊಂದಿಗೆ ಸಂಭಾಷಣೆ ನಡೆಸಿರುವ ಮಹಿಳೆಯ ಫೋಟೊಗಳು ಹಾಗೂ ಫೋನ್ ನಂಬರ್ಗಳನ್ನು ಬಹಿರಂಗಪಡಿಸಿದ್ದಾರೆ.

ಈ ಹಿನ್ನೆಲೆ ಶಮಿ ಹಾಗೂ ಅವರ ಕುಟುಂಬ ಸದಸ್ಯರು ತನ್ನನ್ನು ಕೊಲ್ಲಲು ಯತ್ನಿಸಿದ್ದಾರೆ. ಅವರ ಮನೆಯಲ್ಲಿರುವವರೆಲ್ಲರೂ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನನ್ನ ಕುಟುಂಬ ಹಾಗೂ ಪುತ್ರಿಗಾಗಿ ಎಲ್ಲ ಕಷ್ಟವನ್ನು ಸಹಿಸಿಕೊಂಡಿದ್ದೆ. ಆದರೆ, ನನ್ನನ್ನು ಕೆಟ್ಟದಾಗಿ ನಿಂದಿಸುವುದು, ಹಲವು ಮಹಿಳೆಯರೊಂದಿಗೆ ಸಂಭಾಷಣೆ ನಡೆಸುವುದನ್ನು ನೋಡಿದಾಗ ತಾಳ್ಮೆ ಕಳೆದುಕೊಂಡೆ. ಇದನ್ನು ಇನ್ನು ತಾಳಲು ಸಾಧ್ಯವಿಲ್ಲ. ಎಲ್ಲ ಲಭ್ಯವಿರುವ ಸಾಕ್ಷಿಗಳೊಂದಿಗೆ ಶಮಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಯೋಜನೆ ಹಾಕಿಕೊಂಡಿದ್ದೇನೆ ಎಂದು ಜಹಾನ್ ಹೇಳಿದ್ದಾರೆ.

ತನ್ನ ವಿರುದ್ಧ ಪತ್ನಿ ಮಾಡಿರುವ ಎಲ್ಲ ಆರೋಪವನ್ನು ಫೇಸ್ಬುಕ್ ಮೂಲಕವೇ ಶಮಿ ನಿರಾಕರಿಸಿದ್ದಾರೆ. ಇದೊಂದು ನನ್ನ ವಿರುದ್ಧ ನಡೆಸಲಾಗಿರುವ ಪಿತೂರಿ. ಈ ಮೂಲಕ ನನ್ನ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಹೇಳಿದ್ದಾರೆ. (ವರದಿ: ಪಿ.ಎಸ್ )

 

Leave a Reply

comments

Related Articles

error: