ಮೈಸೂರು

ಕನ್ನಡ ಭಾಷೆಯ ಬೆಳವಣಿಗೆಗೆ ಕನಕದಾಸರ ಕೊಡುಗೆ ಅಪಾರ: ಭಗವಾನ್

ರಾಮ ಮತ್ತು ಕೃಷ್ಣರನ್ನು ದೇವರು ಎಂದು ಪೂಜಿಸಲಾಗುತ್ತದೆ ಆದರೆ ಅವರು ದೇವರಲ್ಲ. ಅವರೂ ಮನುಷ್ಯರೇ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಮೈಸೂರು ಶರಣರ ಮಂಡಳಿ ಆಯೋಜಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಪ್ರಯುಕ್ತ ಕನಕ ಅಂದು-ಇಂದು ಒಂದು ಚಿಂತನೆ ಹಾಗೂ ಕನಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆಯನ್ನು ಕೆ.ಎಸ್.ಭಗವಾನ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಕೃಷ್ಣ ಆದರ್ಶ ಪುರುಷನಲ್ಲ. 16ಸಾವಿರ ಪತ್ನಿಯರನ್ನು ಹೊಂದಿದ ಆತ ಆದರ್ಶ ಪುರುಷನಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕನ್ನಡನಾಡಿನಲ್ಲಿ ಹಲವಾರು ಸಂತರು ಗುರುತಿಸಿಕೊಂಡಿದ್ದಾರೆ. ಅವರಲ್ಲಿ ಕನಕದಾಸರು ಮಾತ್ರ ತಮ್ಮ ಕವನಗಳಲ್ಲಿ ಸಮಾಜದಲ್ಲಿ ಸಮಾನತೆಯ  ಸಂದೇಶವನ್ನು  ಸಾರಿದರು ಎಂದು ತಿಳಿಸಿದರು. ಕನ್ನಡ ಭಾಷೆಯ ಬೆಳವಣಿಗೆಗೆ ಅವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಕೆ.ಎಸ್.ಶಿವರಾಮು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ.ಎಸ್.ಸೋಮಶೇಖರ್, ಮೈಸೂರು ಮಿತ್ರ ದಿನಪತ್ರಿಕೆಯ ವರದಿಗಾರ ಎಂ.ಟಿ.ಯೋಗೀಶ್ ಕುಮಾರ್ ಅವರಿಗೆ ಕನಕಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಮರಿಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: