ಮೈಸೂರು

ನ.27-30 : ಬೇಲದಕುಪ್ಪೆ ಮಹದೇಶ್ವರ ಜಾತ್ರೆ ; ಖಾಸಗಿ ವಾಹನಗಳ ಪ್ರವೇಶ ನಿರ್ಬಂಧ

file2ನವೆಂಬರ್ 27ರಿಂದ 30ರವರೆಗೆ ಬೇಲದಕುಪ್ಪೆ ಮಹದೇಶ್ವರ ಜಾತ್ರೆ ನಡೆಯಲಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನದೊಳಗಿರುವ ಹುಲಿ ಸಂರಕ್ಷಿತ ಪ್ರದೇಶದವಾದ ಇಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ವಾಹನಗಳ ಪ್ರವೇಶವನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ.

ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲೂಕಿಗೆ ಸೇರಿದ ಬೇಲದಕುಪ್ಪೆ ಮಹದೇಶ್ವರ ದೇಗುಲದಲ್ಲಿ ನಾಲ್ಕು ದಿನಗಳ ಕಾಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಗೆ ಸಾವಿರಾರು ಜನರು ಸೇರುವುದರಿಂದ ಪ್ರಾಣಿ-ಪಕ್ಷಿಗಳ ಸಂಕುಲಕ್ಕೆ ತೊಂದರೆಯಾಗಬಾರದೆನ್ನುವ ದೃಷ್ಟಿಯಲ್ಲಿ ಅರಣ್ಯ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ.

ಖಾಸಗಿ ವಾಹನಗಳನ್ನು ನಿಲ್ಲಿಸಲು ನಾಲ್ಕು ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ದೇವಸ್ಥಾನಕ್ಕೆ ಹೋಗಲು ಯಡಿಯೂಲ ಸರ್ಕಾರಿ ಆಸ್ಪತ್ರೆ ಬಳಿಯಿಂದ 30ಸರ್ಕಾರಿ ಬಸ್ ಗಳನ್ನು ಉಚಿತವಾಗಿ ಜಿಲ್ಲಾಡಳಿತ ವತಿಯಿಂದ ಸಾರ್ವಜನಿಕರಿಗೆ  ಸೇವೆ ಒದಗಿಸಲಿದೆ. ಖಾಸಗಿ ವಾಹನಗಳನ್ನು ಬಡಗಲಪುರ ಸರ್ಕಾರಿ ಶಾಲೆಯ ಮುಂದೆ ಹಾಗೂ ಯಶವಂತಪುರ ಗೇಟ್ ಬಳಿ ಪ್ರತಿಯೊಬ್ಬರೂ ತಾವು ತಂದ ಖಾಸಗಿ ವಾಹನಗಳನ್ನು ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ, ಅಲ್ಲಿಂದ ಜಿಲ್ಲಾಡಳಿತ ಒದಗಿಸಿದ ಬಸ್ಸಿನಲ್ಲಿ ತೆರಳಬೇಕು.

ಫಾರೇಟ್  ಚೇನ್ ಗೇಟ್ (ಅರುಳ ಹಳ್ಳಿ ಅರಣ್ಯ ಗೇಟ್) ಹತ್ತಿರ ಖಾಸಗಿ ವಾಹನಗಳನ್ನು ನಿಲ್ಲಿಸಲು ವವ್ಯಸ್ಥೆ ಮಾಡಲಾಗಿದೆ.   ಅದರ ನೇತೃತ್ವವನ್ನು ಓರ್ವ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್,  ರೇಂಜ್ ಫಾರೆಸ್ಟ್ ಆಫೀಸರ್, 10 ಜನ ಪೊಲೀಸರು  10 (ಎಸ್.ಟಿ.ಪಿ.ಸ್) ವಿಶೇಷ ಹುಲಿ ರಕ್ಷಣಾ ಪಡೆಯವರು ಮತ್ತು 5 ಜನ ಸ್ಥಳೀಯ ಹಾಗೂ ಹೊರಗಿನ ಎನ್‍ಜಿಓ ಕಾರ್ಯ ಕರ್ತರು ಇರುತ್ತಾರೆ.  ದೇವಸ್ಥಾ ನದ ಬದಿಯಲ್ಲಿ ಕೇವಲ ಪೂಜಾ ಸಾಮಾಗ್ರಿ ಅಂಗಡಿ ಮಳಿಗೆ ತೆರೆದಿದ್ದು, ದೇವಸ್ಥಾನದ ಭಕ್ತರಿಗೆ ಪೂಜೆ ಸಾಮಾನು ದೊರೆಯುವಂತೆ ಅವಕಾಶ ಮಾಡಲಾಗಿದೆ. ಅಲ್ಲಿ ಯಾರೂ ಕೂಡ ರಾತ್ರಿ ತಂಗುವಂತಿಲ್ಲ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.  ಈ ಎಲ್ಲಾ ಉಸ್ತುವಾರಿ ಹೊಣೆಯನ್ನು ಯಡಿಯೂಲ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ ವಹಿಸಿದ್ದು, ಅರಣ್ಯ ಇಲಾಖೆ ತೆಗೆದುಕೊಂಡಿರುವ ಈ ಕ್ರಮಕ್ಕೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕರಿಸಿ ಕಾಡು ಹಾಗೂ ಕಾಡು ಪ್ರಾಣಿಗಳನ್ನು ಉಳಿಸಿ ರಕ್ಷಿಸಬೇಕೆಂದು ಅರಣ್ಯ ಇಲಾಖೆ ಕೇಳಿಕೊಂಡಿದೆ. ಪ್ರತಿ ವರ್ಷ ಜನ ದಟ್ಟಣೆ ಕಡಿಮೆ ಮಾಡಲು ಈ ರೀತಿ ಪ್ರಕ್ರಿಯೆ ಗಳು ನಡೆಯುತ್ತಿ ದ್ದರೂ ಶಾಶ್ವತ ಪರಿಹಾರ ಮಾತ್ರ ಸಿಗುತ್ತಿಲ್ಲ. ಮೊದಲಿನಿಂದ ಕಾಡಂಚಿನ ಗ್ರಾಮದವರು ಈ ದೇವಾಲಯದ ಜತೆ ನಂಟನ್ನು ಹೊಂದಿದ್ದು, ಪೂಜಿಸಿ ಕೊಂಡು ಬಂದಿದ್ದಾರೆ. ಕಾಡಿನ ಜನರ ಧಾರ್ಮಿಕ ಆಚರಣೆಗೆ ಯಾರೂ ಅಡ್ಡಿ ಮಾಡುವುದಿಲ್ಲ. ಆದರೆ ಮಿತಿಮೀರಿದ ಜನದಟ್ಟಣೆಯಿಂದ ವನ್ಯಜೀವಿಗಳ ಜೀವನಕ್ಕೆ ತೊಂದರೆ ಯಾಗುತ್ತದೆ. ಆ ನಿಟ್ಟಿನಲ್ಲಿ ರಕ್ಷಿತಾರಣ್ಯದೊಳಗೆ ಜಾತ್ರೆ ಮತ್ತು ಆಚರಣೆಗಳು ನಡೆಯದಿದ್ದರೆ ಒಳ್ಳೆಯದು. ಅರಣ್ಯ ಇಲಾಖೆ, ಸರ್ಕಾರ, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಇಚ್ಛಾಶಕ್ತಿ ಮತ್ತು ಪ್ರಮುಖವಾಗಿ ಜನರ ಸಹಕಾರ ಹಾಗೂ  ಇಚ್ಛಾಶಕ್ತಿ ಬೇಕೆಂಬುದು ವನ್ಯ ಪ್ರೇಮಿಗಳ ಅಭಿಪ್ರಾಯ.

Leave a Reply

comments

Related Articles

error: