ಮೈಸೂರು

ಒಕ್ಕೂಟದಿಂದ ಉತ್ಪಾದಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ : ಪಿ.ಎಂ ಪ್ರಸನ್ನ

ಮೈಸೂರು(ಬೈಲುಕುಪ್ಪೆ),ಮಾ.7:- ಹಾಲು ಒಕ್ಕೂಟದಿಂದ ಉತ್ಪಾದಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮೈ.ಜಿ.ಹಾ.ಒ.ನಿ. ನಿರ್ದೇಶಕ ಪಿ.ಎಂ ಪ್ರಸನ್ನ ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಮಂಚದೇವನಹಳ್ಳಿ ಗ್ರಾಮದ  ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ 8 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಶುದ್ಧ ನೀರಿನ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಒಕ್ಕೂಟದಿಂದ ಹಾಲು ಉತ್ಪಾದಕರಿಗಾಗಿ ಜನಶ್ರಿ ಯೋಜನೆ ಜಾರಿಯಲ್ಲಿದ್ದು ಇದರ ನಿಯಮದಡಿಯಲ್ಲಿ ಶುಲ್ಕವನ್ನು ಪಾವತಿಸಿ ಮರಣೋತ್ತರದ ನಂತರ ಅವರ ಕುಟುಂಬಕ್ಕೆ  ನಿಯಮದಡಿಯಲ್ಲಿ ಹಣಕಾಸಿನ ನೆರವು ದೊರೆಯಲ್ಲಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ತಮ್ಮ ತಂದೆ ಕೆ. ಮಹದೇವ್ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು. ಸಹಕಾರ ಸಂಘದ ಅಧ್ಯಕ್ಷ ಎಂ.ಬಿ. ಮಂಜುನಾಥ್ ಮಾತನಾಡಿ ಸಂಘದ ವತಿಯಿಂದ ಶುದ್ಧ ನೀರಿನ ಘಟಕವನ್ನು ಗ್ರಾಮದಲ್ಲಿ ತೆರೆಯಲಾಗಿದ್ದು, ಇದರ ಸದುಪಯೋಗ ಪಡಿಸಿಕೊಂಡು ನೀರಿನಿಂದ ಬರಬಹುದಾದ ಕಾಯಿಲೆಗಳಿಂದ ಮುಕ್ತರಾಗಬೇಕೆಂದು ಸಲಹೆ ನೀಡಿದರು.

ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿ ಮಾತನಾಡಿ ಶುದ್ಧ ನೀರಿನ ಘಟಕ ತೆರೆಯಲಾಗಿದೆ. ಸಂಘಕ್ಕೆ ಆದಾಯಕ್ಕಿಂತ ಸೇವೆಯೇ ಮುಖ್ಯವಾಗಿದ್ದು ಗ್ರಾಮಸ್ಥರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ತಿಳಿಸಿದರು.

ಸಂಘದಲ್ಲಿ ಅಧಿಕವಾಗಿ ಹಾಲು ಸರಬರಾಜು ಮಾಡುವ ಉತ್ಪಾದಕರನ್ನು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯ ನಿರ್ವಾಹಕ ಅಧಿಕಾರಿ ಜೆ.ವಿ. ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ವಿಸ್ತರಣಾಧಿಕಾರಿ ನಿಶ್ಚಿತ್, ಸಂಘದ ಉಪಾಧ್ಯಕ್ಷ ನಾಗನಾಯಕ, ಗ್ರಾಪಂ ಸದಸ್ಯೆ ಶೈಲಜಾ, ಗ್ರಾಮದ ಯಾಜಮಾನ ಶ್ರೀನಿವಾಸ, ನಿರ್ದೇಶಕರಾದ ಪಿ.ಜೆ. ಶಿವಣ್ಣ, ಎಂ.ಡಿ ವೆಂಕಟೇಶ, ಸಿದ್ದನಾಯಕ, ನಾಗರಾಜು, ಬೋರೆಗೌಡ, ಚಂದ್ರೆಗೌಡ, ಆನಂದ, ಸುನಿತಾ, ನಾಗರತ್ನ, ಮತ್ತಿತರರು ಇದ್ದರು.(ಆರ್.ಬಿ.ಆರ್,ಎಸ್.ಎಚ್)

Leave a Reply

comments

Related Articles

error: