ಮೈಸೂರು

ನಾಳೆ ನಗರದ ವಿವಿಧೆಡೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಮೈಸೂರು,ಮಾ.7 : (ಜಿಲ್ಲಾಡಳಿತ) ಜಿಲ್ಲಾಡಳಿತ ಮತ್ತು ಜಿ.ಪಂ.ಹಾಆಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾ.8ರ ಬೆಳಗ್ಗೆ 11 ಗಂಟೆಗೆ ಪುರಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಂಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಉದ್ಘಾಟಿಸುವರು, ಶಾಸಕ ಎಂ.ಕೆ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು, ಸಚಿವ ತನ್ವೀರ್ ಸೇಠ್, ಮೇಯರ್ ಭಾಗ್ಯವತಿ, ಕರ್ನಾಟಕ ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿ.ಪಂ.ಅಧ್ಯಕ್ಷ ನಯಿಮಾ ಸುಲ್ತಾನ ನಜೀರ್ ಅಹಮದ್, ಸಂಸದರಾದ ಪ್ರತಾ ಸಿಂಹ, ಸಿ.ಎಸ್.ಪುಟ್ಟರಾಜು, ಆರ್.ಧ್ರುವನಾರಾಯಣ ಸೇರಿದಂತೆ ಹಲವಾರು ಜನಪ್ರತಿನಿಧಿಗಳು, ನಿಗಮ ಮಂಡಳಿ ಅಧ್ಯಕ್ಷರು ಭಾಗಿಯಾಗುವರು.

ಜೆಎಸ್ಎಸ್ ಆಸ್ಪತ್ರೆಯು ನಾಳೆ ಬೆಳಗ್ಗೆ 10.30ಕ್ಕೆ ಆಸ್ಪತ್ರೆಯ ಮುಖ್ಯ ಸಭಾಂಗಣದಲ್ಲಿ ಆಯೋಜಿಸಿದೆ. ಮೈವಿವಿಯ ಕುಲಸಚಿವೆ ಡಿ.ಭಾರತಿ ಮುಖ್ಯ ಅತಿಥಿಯಾಗಿ ಭಾಗಿಯಾಗುವರು.

ವಿದ್ಯಾವರ್ಧಕ ಕಾಲೇಜು ಆಫ್ ಇಂಜಿನಿಯರ್ಸ್ ನಲ್ಲಿ ನಾಳೆ ಮಧ್ಯಾಹ್ನ 3.30ಕ್ಕೆ  ಮುಖ್ಯ ಅತಿಥಿ ಮೇಯರ್ ಭಾಗ್ಯವತಿ, ಮೈವಿವಿಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೇ ಪ್ರೊ.ಎಂ.ಇಂದಿರಾ, ವಿವಿ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಎಸ್.ಎನ್.ಲಕ್ಷ್ಮೀನಾರಾಯಣ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆ ಸಪ್ತಾಹವನ್ನು ಹಮ್ಮಿಕೊಂಡು ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ.

ಮಹಾರಾಣಿ ಕಲಾ ಕಾಲೇಜಿನಲ್ಲಿ : ಬೆಳಗ್ಗೆ 10 ಗಂಟೆಗೆ, ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ. ಮುಖ್ಯ ಅತಿಥಿಗಳಾಗಿ ವಿಶೇಷ ಭೂಸ್ವಾಧೀನ ಸಹಾಯಕ ಆಯುಕ್ತೆ ವಿ.ಆರ್.ಶೈಲಜಾ, ಮುಡಾ ಕಾರ್ಯದರ್ಶಿ ಎಂ.ಕೆ.ಸವಿತ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತೆ ಎನ್.ದೀಪ. ಪ್ರಾಂಶುಪಾಲರಾದ ಡಾ.ಎಂ.ಚನ್ನಬಸವೇಗೌಡ ಅಧ್ಯಕ್ಷತೆ ವಹಿಸುವರು.

ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು : ಬೆಳಗ್ಗೆ 11ಕ್ಕೆ ನಟರಾಜ ಸಭಾ ಭವನ ‘ ಮಹಿಳಾ ಸಬಲೀಕರಣ ಮತ್ತು ಮಹಿಳಾ ದೌರ್ಜನ್ಯ ತಡೆಗಟ್ಟುವ ಸಮಿತಿಯಿಂದ ಕಾರ್ಯಕ್ರಮ ಆಯೋಜನೆ, ನಟರಾಜ ಪ್ರತಿಷ್ಠಾನದ ಶ್ರೀಚಿದಾನಂದ ಮಹಾಸ್ವಾಮಿಗಳು ಸಾನಿಧ್ಯ, ಲೋಕಾಯುಕ್ತ ಅಧೀಕ್ಷಕಿ ಜೆ.ಕೆ.ರಶ್ಮಿಯವರಿಂದ ಉದ್ಘಾಟನೆ, ಒಡನಾಡಿಯ ಪ್ರಭಾಮಣಿ, ಪ್ರಾಂಶುಪಾಲೆ ಡಾ.ಎಂ.ಶಾರದ ಭಾಗಿಯಾಗುವರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯ : ಮಾ.11ರ ಬೆಳಗ್ಗೆ 11 ಗಂಟೆಗೆ ಯಾದವಗಿರಿಯ ಜ್ಞಾನಪ್ರಕಾಶ ಭವನದಲ್ಲಿ. ಮಹಿಳೆಯ ಪ್ರಸಕ್ತ ಸವಾಲುಗಳು ಹಾಗೂ ಆಯ್ಕೆಗಳು, ವಿಷಯವಾಗಿ ಉಪನ್ಯಾಸ, ಬಿ.ಕೆ.ಲಕ್ಷ್ಮೀ ಸಾನಿಧ್ಯ. ಸಾಹಿತಿ ಡಾ.ಕೆ.ಅನಂತರಾಮು, ಶಾರದಾ ವಿಲಾಸ ಕಾಲೇಜಿನ ಡಾ.ವಿಮಲಶ್ರೀ, ಆಕಾಶವಾಣಿ ನಿರೂಪಕಿ ಎಂ.ಎಸ್.ಭಾರತಿ ಇರುವರು.

ಜೆಎಸ್ಎಸ್ ತಪಾಸಣಾ ಶಿಬಿರ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಾ.8 ರಂದ 18ರವರೆಗೆ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಆಯೋಜಿಸಿದೆ.

ಶಿಬಿರದಲ್ಲಿ ಅತೀ ರಕ್ತಸ್ರಾವ, ಬಿಳಿಮುಟ್ಟು, ಸ್ಥೂಲಕಾಯ, ಬಂಜೆತನ, ಆರೈಕೆ, ರಕ್ತದೊತ್ತಡ, ಮಧುಮೇಹ, ಥೈರಾಯ್ಡ್ ಬೆನ್ನು ನೋವಿಗೆ ತಜ್ಞ ವೈದ್ಯರಿಂದ ತಪಾಸಣೆ ಹಾಗೂ ಆಪ್ತ ಸಮಾಲೋಚನೆಯನ್ನು ಆಯೋಜಿಸಿದೆ. ಮಾಹಿತಿಗಾಗಿ ಮೊ.ಸಂ.9591588885, 0821 2548231, 2548433 ಅನ್ನು ಸಂಪರ್ಕಿಸಬಹುದು.

ಯಶಸ್ವಿನಿ ಮಹಿಳಾ ಸಂಘದಲ್ಲಿ ಮಾ.14ರ ಮಧ್ಯಾಹ್ನ 2.30ಕ್ಕೆ ಚನ್ನಕೇಶವ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಂಡಿದೆ. ಎಲ್ಲಾ ಪದಾಧಿಕಾರಿಗಳು, ಸದಸ್ಯರು ಭಾಗಿಯಾಗಲೂ ಕೋರಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: