ದೇಶಪ್ರಮುಖ ಸುದ್ದಿ

ಜಿಎಸ್‍ಟಿಗೆ ರಾಷ್ಟ್ರಪತಿ ಒಪ್ಪಿಗೆ

ನವದೆಹಲಿ: ದೇಶಾದ್ಯಂತ ಏಕರೂಪದ ಸರಕು ಮತ್ತು ಸೇವಾ ತೆರಿಗೆ ವಿಧಿಸುವ ಜಿಎಸ್‍ಟಿ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಸಹಿ ಮಾಡಿದ್ದಾರೆ.

2017ರ ಏಪ್ರಿಲ್ 1 ರಿಂದ ಏಕರೂಪ ತೆರಿಗೆ ಪದ್ಧತಿ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ರಾಷ್ಟ್ರಪತಿಗಳು ಸಹಿ ಹಾಕಿರುವುದರಿಂದ ಸರ್ಕಾರದ ಹಾದಿ ಸುಗಮವಾಗಿದೆ.

ಸಂಸತ್ತಿನ ಎರಡೂ ಸದನಗಳಲ್ಲೂ ವಿಧೇಯಕಕ್ಕೆ ಅಂಗೀಕಾರ ದೊರೆತಿತ್ತು. ಇದರ ಜೊತೆ 17 ರಾಜ್ಯಗಳು ವಿಧೇಯಕ ಅಳವಡಿಸಿಕೊಳ್ಳಲು ಸಮ್ಮತಿ ಸೂಚಿಸಿವೆ. ವಿಧೇಯಕವನ್ನು ಶೇಕಡಾ 50 ರಷ್ಟು ರಾಜ್ಯಗಳು ಅಂಗೀಕರಿಸಬೇಕೆಂಬ ನಿಯಮವಿದ್ದು, ಆಂಧ್ರಪ್ರದೇಶ, ಅರುಣಾಚಲಪ್ರದೇಶ ರಾಜ್ಯಗಳು ಗುರುವಾರ ಒಪ್ಪಿಗೆ ಸೂಚಿಸಿದ ನಂತರ ವಿಧೇಯಕವನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿಕೊಡಲಾಗಿತ್ತು.

ರಾಷ್ಟ್ರಪತಿಗಳ ಸಹಿ ಹಾಕಿದ ನಂತರ ‘ಜಿಎಸ್‍ಟಿ ಮಂಡಳಿ’ ರಚನೆ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಈ ಮಂಡಳಿಯು ಭವಿಷ್ಯದ ತೆರಿಗೆ ದರವನ್ನು ನಿಗದಿಪಡಿಸಲಿದೆ.

Leave a Reply

comments

Related Articles

error: