ಸುದ್ದಿ ಸಂಕ್ಷಿಪ್ತ

“ಸಮರ್ಥ ಸದ್ವಿದ್ಯಾ” ಸಾಂಸ್ಕೃತಿಕ ಸ್ಪರ್ಧೆ

ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಅಂತರ ಕಾಲೇಜಿನ “ಸಮರ್ಥ ಸದ್ವಿದ್ಯಾ” ಸಾಂಸ್ಕೃತಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ರಸಪ್ರಶ್ನೆ, ಕ್ಷಿಪ್ರ ಚದುರಂಗದಾಟ, ಶಾಸ್ತ್ರೀಯ ನೃತ್ಯ, ಗಾಯನ, ಶಾಸ್ತ್ರೀಯ ವಾದ್ಯಗಳನ್ನು ನುಡಿಸುವುದು, ಭಗವದ್ಗೀತಾ, ಸಿನಿಮಾ ಹಿಟ್‍, ಜಾನಪದ ಸಂಗೀತ, ಇಂಗ್ಲೀಷ್ ಮತ್ತು ಕನ್ನಡದಲ್ಲಿ ಚರ್ಚಾ ಸ್ಪರ್ಧೆ, ಏಕಾಪಾತ್ರಭಿನಯವನ್ನು ಹಮ್ಮಿಕೊಳ್ಳಲಾಗಿತ್ತು.

ಕಾಲೇಜು ಆವರಣದ ವಿವೇಕಾನಂದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಕಾಲೇಜು ಆಡಳಿತ ಮಂಡಳಿ ಸದಸ್ಯ ಪ್ರೊ.ಎಂ.ಎಸ್.ಕೆ.ನರಹರಿ ಬಾಬು ಚಾಲನೆ ನೀಡಿದರು. ಉಪಾಧ್ಯಕ್ಷ ಎ.ವಿ. ಶ್ರೀಧರಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮಹಾರಾಣಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣಮೂರ್ತಿ ಅವರು ವಿಜೇತರಿಗೆ ಬಹುಮಾನ ವಿತರಿಸಿದರು. ಕಾರ್ಯದರ್ಶಿ ಎಂ.ಡಿ. ಗೋಪಿನಾಥ್ ಉಪಸ್ಥಿತರಿದ್ದರು.

Leave a Reply

comments

Related Articles

error: