ಮೈಸೂರು

ರಾಷ್ಟ್ರೀಯ ಯುವ ಸ್ವಯಂ ಸೇವಕ : ಅರ್ಜಿ ಆಹ್ವಾನ

ಮೈಸೂರು,ಮಾ.7 : ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯವು ‘ರಾಷ್ಟ್ರೀಯ ಯುವ ಸ್ವಯಂ ಸೇವಕರು’ ಯೋಜನೆಯನ್ನು ಆರಂಭಿಸುತ್ತಿದ್ದು 20 ಸಾವಿರ ಯುವಜನರನ್ನು ರಾಷ್ಟ್ರೀಯ ಯುವ ಸ್ವಯಂಸೇವಕರನ್ನು ಪೂರ್ಣ ಪ್ರಮಾಣದಲ್ಲಿ ಎರಡು ವರ್ಷಗಳ ಅವಧಿಗೆ ನಿಯೋಜಿಸಿಕೊಳ್ಳುತ್ತಿದೆ, ಆಯ್ಕೆಯಾದವರಿಗೆ ಸೂಕ್ತ ಗೌರವ ಧನ ಜೊತೆಗೆ ವಿಶೇಷ ತರಬೇತಿ ನೀಡಲಾಗುವುದು.

ಜಿಲ್ಲೆಯ 7 ತಾಲ್ಲೂಕುಗಳಿಂದ ಕಂಪ್ಯೂಟರ್ ಅಪರೇಟರ್ಸ್ ಸೇರದಂತೆ ಒಟ್ಟು 16 ಜನ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಲಾಗುತ್ತಿದ್ದು ಆಸಕ್ತರು ಜಿಲ್ಲಾ ಯುವಜನ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ನಂ.26/ಎ, ಇಂಡಸ್ಟ್ರಿಯಲ್ ಸಬರ್ಬ್ 3ನೇ ಹಂತ, ರಾಜರಾಜೇಶ್ವರಿ ದೇವಸ್ಥಾನದ ರಸ್ತೆ, ವಿಶ್ವೇಶ್ವರ ನಗರ, ಮೈಸೂರು-570008 ಇಲ್ಲಿ ಭೇಟಿಯಾಗಬಹುದು. N.Y.K.Web site www.nyks.org down load ಮಾಡಿಕೊಂಡು ಮಾ.19ರೊಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ದೂ.ಸಂ.0821 2489853, 2489858 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: