ಸುದ್ದಿ ಸಂಕ್ಷಿಪ್ತ

ವಿವಿಧೆಡೆ ಆಹಾರ ಅದಾಲತ್

ಮೈಸೂರು, ಮಾ.8:- ಆಹಾರ ನಾಗರಿಕರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಮಾರ್ಚ್ ಮಾಹೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಹಾರ ಅದಾಲತ್  ನಡೆಯಲಿದೆ ಎಂದು ಆಹಾರ ನಾಗರಿಕರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಹುಣಸೂರು ತಾಲೂಕಿನಲ್ಲಿ ಮಾರ್ಚ್ 8 ರಂದು ಬೆಳಿಗ್ಗೆ 10 ಗಂಟೆಗೆ ಬಿಳಿಕೆರೆ ವಿಎಸ್‍ಎಸ್‍ಎನ್ ಹಾಗೂ ಮಧ್ಯಾಹ್ನ 3 ಗಂಟೆಗೆ ಕಲ್ಲಳ್ಳಿ ವಿಎಸ್‍ಎಸ್‍ಎನ್ ನಲ್ಲಿ ಆಹಾರ ಅದಾಲತ್ ನಡೆಯಲಿದೆ.  ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಮಾರ್ಚ್ 13 ರಂದು ಬೆಳಿಗ್ಗೆ 10 ಗಂಟೆಗೆ ಚೆಕ್ಕೂರು ನಾಗೇಶ್ ನ್ಯಾಯಬೆಲೆ ಅಂಗಡಿ (ಪರ್ಯಾಯ ಮಾದಯ್ಯ ಕೃಷ್ಣಾಪುರ) ಹಾಗೂ ಮಧ್ಯಾಹ್ನ 3 ಗಂಟೆಗೆ ಜೆ.ಬಿ. ಸರಗೂರು ಉಮಾದೇವಿ ನ್ಯಾಯಬೆಲೆ ಅಂಗಡಿ(ಪರ್ಯಾಯ ಯತೀಶ್, ಸಿಂಡೇನಹಳ್ಳಿ)ಯಲ್ಲಿ ಆಹಾರ ಅದಾಲತ್ ನಡೆಯಲಿದೆ.
ನಂಜನಗೂಡು  ತಾಲೂಕಿನಲ್ಲಿ ಮಾರ್ಚ್ 15 ರಂದು ಬೆಳಿಗ್ಗೆ 10 ಗಂಟೆಗೆ ಕಾಟೂರು  ನ್ಯಾಯಬೆಲೆ ಅಂಗಡಿ-51 ಹಾಗೂ ಮಧ್ಯಹ್ನಾ 3 ಗಂಟೆಗೆ ಇಬ್ಜಾಲ ನ್ಯಾಯಬೆಲೆ ಅಂಗಡಿ ಸಂಖ್ಯೆ 52 ರಲ್ಲಿ ಆಹಾರ ಅದಾಲತ್ ನಡೆಯಲಿದೆ. ಮೈಸೂರು ನಗರದಲ್ಲಿ ಮಾರ್ಚ್ 17 ರಂದು ಬೆಳಿಗ್ಗೆ 10 ಗಂಟೆಗೆ ಕೆ.ಆರ್. ಮೊಹಲ್ಲಾ ನ್ಯಾಯಬೆಲೆ ಅಂಗಡಿ ಸಂಖ್ಯೆ -240, ಚಾಮರಾಜ ಮೊಹಲ್ಲಾ ಅಂಗಡಿ ಸಂಖ್ಯೆ-221, ಮಾರ್ಚ್ 24 ರಂದು ಬೆಳಿಗ್ಗೆ 10 ಗಂಟೆಗೆ ಎನ್.ಆರ್. ಮೊಹಲ್ಲಾ  ನ್ಯಾಯಬೆಲೆ ಅಂಗಡಿ ಸಂಖ್ಯೆ 346 ಹಾಗೂ ಮಧ್ಯಾಹ್ನ 3 ಕ್ಕೆ ನಜರ್‍ಬಾದ್ ನ್ಯಾಯಬೆಲೆ ಅಂಗಡಿ ಸಂಖ್ಯೆ 291 ರಲ್ಲಿ ಆಹಾರ ಅದಾಲತ್ ನಡೆಯಲಿದೆ. ಮೈಸೂರು ತಾಲೂಕಿನಲ್ಲಿ ಮಾರ್ಚ್ 20 ರಂದು ಬೆಳಿಗ್ಗೆ 10 ಗಂಟೆಗೆ ಹುಯಿಲಾಳು ನ್ಯಾಯಬೆಲೆ ಅಂಗಡಿ  ಸಂಖ್ಯೆ -40 ಹಾಗೂ ಮಧ್ಯಾಹ್ನ 3 ಗಂಟೆಗೆ ಮಾವನಹಳ್ಳಿ ನ್ಯಾಯಬೆಲೆ ಅಂಗಡಿ ಸಂಖ್ಯೆ -46 ರಲ್ಲಿ ಆಹಾರ ಅದಾಲತ್ ನಡೆಯಲಿದೆ.  ತಿ.ನರಸೀಪುರ ತಾಲೂಕಿನಲ್ಲಿ ಮಾರ್ಚ್ 22 ರಂದು ಬೆಳಿಗ್ಗೆ 10 ಗಂಟೆಗೆ ಮೆಣಸಿಕ್ಯಾತನಹಳ್ಳಿ ಕುಳ್ಳಯ್ಯ ನ್ಯಾಯಬೆಲೆ ಹಾಗೂ ಮಧ್ಯಾಹ್ನ 3 ಗಂಟೆಗೆ ಚಿದರಹಳ್ಳಿ ಸಿದ್ದಪ್ಪ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಅದಾಲತ್ ನಡೆಯಲಿದೆ. ಕೆ.ಆರ್.ನಗರ ತಾಲೂಕಿನಲ್ಲಿ ಮಾರ್ಚ್ 27 ರಂದು ಬೆಳಿಗ್ಗೆ 10 ಗಂಟೆಗೆ ಅರ್ಜುನಹಳ್ಳಿ ಶಿವಪ್ರಕಾಶ್ ನ್ಯಾಯಬೆಲೆ ಅಂಗಡಿ ಹಾಗೂ ಮಧ್ಯಾಹ್ನ 3 ಗಂಟೆಗೆ ಮಿರ್ಲೆಯ ವಿ.ಎಸ್.ಎಸ್.ಎನ್ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯಲಿದೆ.  ಪಿರಿಯಾಪಟ್ಟಣ ತಾಲೂಕಿನಲ್ಲಿ ಮಾರ್ಚ್ 31 ರಂದು ಬೆಳಿಗ್ಗೆ 10 ಗಂಟೆಗೆ ಕೊಣನೂರು ನ್ಯಾಯಬೆಲೆ ಅಂಗಡಿ ಸಂಖ್ಯೆ 48 ರಲ್ಲಿ ಹಾಗೂ ಮಧ್ಯಾಹ್ನಾ 3 ಗಂಟೆಗೆ ಭುವನಹಳ್ಳಿ ನ್ಯಾಯಬೆಲೆ ಅಂಗಡಿ ಸಂಖ್ಯೆ 57 ರಲ್ಲಿ ಆಹಾರ ಅದಾಲತ್ ನಡೆಯಲಿದೆ. ಅದಾಲತ್‍ನಲ್ಲಿ ಪಡಿತರ ಚೀಟಿ, ಪಡಿತರ ವಿತರಣೆ ಹಾಗೂ ಅಡುಗೆ ಅನಿಲ ಹಾಗೂ ಇತರೆ ಗ್ರಾಹಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಆಹಾರ ಅದಾಲತ್‍ಗಳಲ್ಲಿ ನೀಡಿ ಪರಿಹಾರ ಕಂಡುಕೊಳ್ಳಬೇಕೆಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: