ಸುದ್ದಿ ಸಂಕ್ಷಿಪ್ತ

ಅಪರಿಚಿತ ವ್ಯಕ್ತಿಯ ಶವ : ವಾರಸುದಾರರ ಪತ್ತೆಗಾಗಿ ಮನವಿ

ಮೈಸೂರು,ಮಾ.8:- ನಾಗನಹಳ್ಳಿ ಎಂ.ಎನ್.ಜಿ.ಟಿ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಕಿ.ಮಿ ನಂ.130/100-200 ರಲ್ಲಿ ಸುಮಾರು  60 ವರ್ಷದ ಅಪರಿಚಿತ ವ್ಯಕ್ತಿ ಮಾರ್ಚ್ 7 ರಂದು ಮೃತಪಟ್ಟಿದ್ದು, ಮೈಸೂರು ರೈಲ್ವೆ ಪೊಲೀಸರಿಗೆ ದೊರೆತಿರುತ್ತದೆ. ಮೃತ ದೇಹವು ಕೆ.ಆರ್.ಆಸ್ಪತ್ರೆಯ ಶವಗಾರದಲ್ಲಿದೆ.

ಅಪರಿಚಿತ ವ್ಯಕ್ತಿಯ ಗುರುತು ಎತ್ತರ 5.6 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಶರೀರ, ಮೊಂಡನೆಯ ಮೂಗು, ತಲೆಯಲ್ಲಿ 3 ಇಂಚು ಬಿಳಿ ಕೂದಲು, ಮುಖದಲ್ಲಿ 1/2 ಇಂಚು ಬಿಳಿ ಮೀಸೆ ಶೇವಿಂಗ್ ಮಾಡಿರುತ್ತಾರೆ. ನೀಲಿ ಬಣ್ಣದ ಅರ್ಧ ತೋಳಿನ ಬನಿಯನ್, ತಿಳಿ ಕಪ್ಪು ಬಣ್ಣದ ಕಾಟನ್ ಪ್ಯಾಂಟ್, ಕಪ್ಪು ಬಣ್ಣದ ಲಾಡಿ ನಿಕ್ಕರ್, ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಧರಿಸಿರುತ್ತಾರೆ.  ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579 ಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Leave a Reply

comments

Related Articles

error: