ಮೈಸೂರು

ನೇರ ಪ್ರಜಾಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮನಾಗಿ ಬದುಕುವ ವ್ಯವಸ್ಥೆಯಿದೆ : ವಿಲ್ಫ್ರೆಡ್ ಡಿಸೋಜ ಅಭಿಮತ

ಮೈಸೂರು,ಮಾ.8:- ನೇರ ಪ್ರಜಾಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮನಾಗಿ ಬದುಕುವ ವ್ಯವಸ್ಥೆಯಿದೆ. ಪ್ರಾತಿನಿಧಿಕ ಪ್ರಜಾಪ್ರಭುತ್ವದಲ್ಲಿ ಕೆಲವರಿಗೆ ಎಲ್ಲ ಸೌಲಭ್ಯಗಳಿವೆ. ಇನ್ಕೆಲವರು ದಿನದ ತುತ್ತಿಗೂ ಹೋರಾಡುವ ಪರಿಸ್ಥಿತಿ ಇಂದಿಗೂ ಮುಂದುವರಿದಿದೆ ಎಂದು ಜನವಿಕಾಸ ಕರ್ನಾಟಕ ಮತ್ತು ಟೆಕ್ನಿಶಿಯನ್ ಇನ್ ಪಂಚಾಯತ್ ರಾಜ್ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಮೈಸೂರು ವಿವಿ ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಅಭಿವೃದ್ಧಿಗಾಗಿ ಸಬಲತೆ ಮತ್ತು ವಿಕೇಂದ್ರೀಕರಣ ಭಾರತದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರ ಕುರಿತ ಕಾರ್ಯಾಗಾರದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.1987ರಲ್ಲಿ ಪಂಚಾಯತ್ ರಾಜ್ ಗೆ ರಾಜ್ಯದಲ್ಲಿ ಎಷ್ಟು ಶಕ್ತಿಯಿದೆ. ಸಾಮರ್ಥ್ಯವಿದೆ, ಅದಕ್ಕೆಷ್ಟು ಅವಕಾಶಗಳಿವೆ ಎಂಬುದನ್ನು ಸಾಬೀತು ಪಡಿಸಲಾಯಿತು. 30ವರ್ಷಗಳ ಕಾಲ ಪಂಚಾಯತ್ ರಾಜ್ ಸಂಸ್ಥೆಗಳ ಜೊತೆ ಬೇರೆ ಬೇರೆ ಹಂತದಲ್ಲಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು. ಅದಕ್ಕೂ ಮೊದಲು ಪಂಚಾಯತ್ ರಾಜ್ ಹೇಗಿತ್ತು, ಸ್ವಾತಂತ್ರ್ಯಪೂರ್ವದಲ್ಲಿ ಇದ್ದವಾ? ವ್ಯವಸ್ಥೆ ಹೇಗಿತ್ತು? ಬ್ರಿಟಿಷರು ಬಂದ ನಂತರ ಏನೆಲ್ಲ ಬದಲಾವಣೆ ಆಯಿತು, ಇವತ್ತು ಯಾವ ಸ್ಥಿತಿಯಲ್ಲಿದ್ದೇವೆ, ಗ್ರಾಮಸ್ವರಾಜ್ ನಲ್ಲಿ ಸಹಭಾಗಿತ್ವ ಅಭಿವೃದ್ಧಿಪರ ಯೋಜನೆಗಳು ಇವೆಲ್ಲ ಪರಿಣಾಮಕಾರಿಯಾಗಿತ್ತ ಎಂಬುದನ್ನು ವಿವರಿಸಿದರು. ನಮಗೆ ಯಾವ ರೀತಿಯ ಪ್ರಜಾಪ್ರಭುತ್ವ ಬೇಕು, ಅಮೇರಿಕದಲ್ಲಿ ಪ್ರೆಸಿಡೆನ್ಶಿಯಲ್ , ನಾರ್ವೆಯಲ್ಲಿ ನೇರ, ಭಾರತದಲ್ಲಿ ಪ್ರಾತಿನಿಧಿಕ ಇದರಲ್ಲಿ ಯಾವುದು ಒಳ್ಳೆಯದು. ಹ್ಯೂಮನ್ ಡೆವಲಪ್  ಮೆಂಟ್ ಮೊದಲು ಕಂಡು ಬರುವ ದೇಶ ಯಾವುದು ಎಂದರೆ ತಕ್ಷಣ ಅಮೇರಿಕ ಅಂತ ಹೇಳುತ್ತೇವೆ. ಆದರೆ ನೇರ ಪ್ರಜಾಪ್ರಭುತ್ವವಿರುವ ದೇಶಗಳು  ಸಾಕಷ್ಟು ಅಭಿವೃದ್ಧಿಯಾಗಿವೆ. ಅವರಿಗೆ ಅಲ್ಲಿ ಎಲ್ಲ ಸೌಲಭ್ಯಗಳಿವೆ. ಪ್ರಾತಿನಿಧಿಕ ಪ್ರಜಾಪ್ರಭುತ್ವದಲ್ಲಿ ಸಿಗುವವರಿಗೆ ಎಲ್ಲಾ ಸೌಲಭ್ಯಗಳು, ಸಮನಾಗಿ ಬದುಕಲು ಅವಕಾಶ ಸಿಗುತ್ತಿಲ್ಲ. ದಿನದ ತುತ್ತಿಗೂ ಹೋರಾಡು  ಪರಿಸ್ಥಿತಿ ಇದೆ. ನಮ್ಮಲ್ಲಿ ದೊಡ್ಡ ಸಂವಿಧಾನವಿದೆ. ಭಾಷಾ, ಭೌಗೋಳಿಕ, ವೈವಿಧ್ಯತೆ ಎಲ್ಲದಕ್ಕೂ ಪೂರಕವಾದ ಸಂವಿಧಾನವಿದೆ. ಹಾಗಾದರೆ ಸಂವಿಧಾನದಲ್ಲಿ ಪಂಚಾಯತ್ ರಾಜ್ ಕುರಿತು ಹೇಳಲಾಗಿದೆಯಾ? ಪಂಚಾಯತ್ ರಾಜ ವ್ಯವಸ್ಥೆಯನ್ನು ರಾಜ್ಯ ನೀತಿ ನಿರ್ದೇಶಕತ್ವದಡಿ ನೀಡಲಾಗಿದ್ದು, ಬೇಕಾದರೆ ರಾಜ್ಯಗಳು ಅದನ್ನು ಬಳಸಿಕೊಳ್ಳಬಹುದು. ಹೀಗೆ ಮಾಡಬೇಕು ಎಂದು ಹೇಳಿಲ್ಲ ಎಂಬುದನ್ನು ಸಂವಿಧಾನ ತಿಳಿಸಿದೆ. 1959ರವರೆಗೂ ಬ್ರಿಟಿಷರು ನೀಡಿದ ಸ್ಥಳೀಯಾಡಳಿತ ವ್ಯವಸ್ಥೆಯೇ ಮುಂದುವರಿಯಿತು. ಪಂಚಾಯತ್ ವ್ಯವಸ್ಥೆಯನ್ನು ಲಾರ್ಡ್ ರಿಪ್ಪನ್ ಜಾರಿಗೆ ತಂದ. ಆದರೆ ಸ್ವಾತಂತ್ರ್ಯ ಸಿಕ್ಕಿ 70ವರ್ಷ ಕಳೆದರೂ ಇನ್ನೂ ಪಾಳೇಗಾರರ ಮನಸ್ಥಿತಿಯಿಂದ ಹೊರಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಡಾ.ಶಿವರಾಯಪ್ಪ ಮಾತನಾಡಿ ಮಹಾತ್ಮರ ಚಿಂತನೆಯ ಮೂಲಕ ಯುವಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಚರ್ಚೆ ಮಾಡುವುದು ಮಾತ್ರವಲ್ಲದೇ ಲೇಖನದ ಮೂಲಕ ಜನಸಾಮಾನ್ಯರನ್ನು ಎಚ್ಚರಿಸಬೇಕು ಎಂದರು.

ಈ ಸಂದರ್ಭ ಆಡಳಿತ ವಿಭಾಗದ ಅಧ್ಯಕ್ಷ ಪ್ರೊ.ದಯಾನಂದ ಮಾನೆ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: