ದೇಶಪ್ರಮುಖ ಸುದ್ದಿ

ಹಾದಿಯಾ ವಿವಾಹ ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ,ಮಾ.8-ಕೇರಳದಲ್ಲಿ ಲವ್ ಜಿಹಾದ್ ರೂಪ ಪಡೆದುಕೊಂಡಿದ್ದ ಶಫೀನ್ ಜಹಾನ್ ಹಾಗೂ ಹಾದಿಯಾ ವಿವಾಹ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ.

ಶಫೀನ್ ಜಹಾನ್ ಹಾಗೂ ಹಾದಿಯಾ ವಿವಾಹವನ್ನು ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಗುರುವಾರ ತಡೆ ನೀಡಿದೆ.

ಶಫೀನ್ ಜಹಾನ್ ಜೊತೆಗಿನ ವಿವಾಹವನ್ನು ರದ್ದುಗೊಳಿಸಿ ತನ್ನನ್ನು ಪೋಷಕರ ವಶಕ್ಕೆ ನೀಡಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಹಾದಿಯಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಳು.

ಅರ್ಜಿಯ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ .ಎಂ.ಖಾನ್ವಿಲ್ಕರ್, ಡಿವೈ. ಚಂದ್ರಚೂಡ್ ಅವರಿದ್ದ ಪೀಠ, ಹಾದಿಯಾ ವಿವಾಹವನ್ನು ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ. (ಎಂ.ಎನ್)

 

 

 

 

Leave a Reply

comments

Related Articles

error: