ಮೈಸೂರು

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಕೂಲಿ ಕಾರ್ಮಿಕರಿಗೆ ಛತ್ರಿ ವಿತರಣೆ

ಮೈಸೂರು,ಮಾ.8:- ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪಾತಿ ಫೌಂಡೇಶನ್ ವತಿಯಿಂದ ದೇವರಾಜ ಮಾರುಕಟ್ಟೆಯ ಚಿಕ್ಕಗಡಿಯಾರದ ಬಳಿ “ಜನನಿ ಜನ್ಮಭೂಮಿ” ಕಾರ್ಯಕ್ರಮದಲ್ಲಿ ಮಹಿಳೆಯರ ರಕ್ಷಣೆ ನಮ್ಮೆಲ್ಲರ ಹೊಣೆ ಸಂದೇಶದೊಂದಿಗೆ ಮಹಿಳಾ ವ್ಯಾಪಾರಸ್ಥರಿಗೆ, ಮಹಿಳಾ ಕೂಲಿ ಕಾರ್ಮಿಕರಿಗೆ 100 ಛತ್ರಿಗಳನ್ನು ವಿತರಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು,

ಇದೇ ಸಂಧರ್ಭದಲ್ಲಿ ನಗರಪಾಲಿಕೆ ಮಾಜಿ  ಸದಸ್ಯ, ಎಂ.ಡಿ ಪಾರ್ಥಸಾರಥಿ ಮಾತನಾಡಿ ಇಂದಿನ ತಾಂತ್ರಿಕ ಸ್ಪರ್ಧಾತ್ಮಕ ಯುಗದಲ್ಲಿ ನಾವೆಷ್ಟೇ ಬೆಳೆದರೂ ವಿಶ್ವದಲ್ಲಿ ಜನಿಸಿದ ಪ್ರತಿ ಮಗುವಿಗೂ ತಾಯಿಯೇ ಮೊದಲ ಗುರು, ನವಭಾರತ ನಿರ್ಮಾಣವಾಗಲು ಸ್ತ್ರೀಶಕ್ತಿ ಪ್ರಮುಖ ಪಾತ್ರವಹಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಜಾನ್ಸಿರಾಣಿಲಕ್ಷ್ಮೀಬಾಯಿ, ಕಿತ್ತೂರ್ ರಾಣಿ ಚೆನ್ನಮ್ಮ, ಓನಕೆ ಒಬ್ಬವ್ವ ಅವರ ಹೋರಾಟಗಳು  ಮಹಿಳಾ ಸಾಧಕರಿಗೆ ಸ್ಫೂರ್ತಿ ಹಾಗೂ ಮಾದರಿಯಾಗಿದೆ. ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸೇವೆಯ ಸಾಧನೆಯೊಂದಿಗೆ ಮುಖ್ಯವಾಹಿನಿಗೆ ಬರುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ 33% ಮಹಿಳಾ ಮೀಸಲಾತಿ ವಿಧೇಯಕ ಕಾನೂನು ಜಾರಿಗೆ ತಂದರೆ ಸಮಾಜದಲ್ಲಿ ಸ್ತ್ರೀ ಶಕ್ತಿ ಸಮಾನತೆಯೊಂದಿಗೆ ಮತ್ತಷ್ಟು ಸುಧಾರಣೆ ತರಲು ಸಾಧ್ಯವಾಗುತ್ತದೆ ಎಂದರು,

ನಂತರ ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ  ಮಹಿಳೆಯರ ರಕ್ಷಣೆಯ ಬಗ್ಗೆ ಸರ್ಕಾರ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಸರಗಳ್ಳತನ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದನ್ನು ತಡೆಗಟ್ಟಲು ಸರ್ಕಾರ ಕಠಿಣವಾದ ಕಾನೂನು ಜಾರಿಗೆ ತರಬೇಕು, ರಾಜ್ಯಸರ್ಕಾರದ ಸಾರಿಗೆಯ ನಗರ ಮತ್ತು ಗ್ರಾಮೀಣ ಬಸ್ಸಿನಲ್ಲಿ ಅನ್ಯರಾಜ್ಯಗಳಲ್ಲಿರುವ ಹಾಗೆಯೇ ‘ಕಡ್ಡಾಯವಾಗಿ ಮಹಿಳಾ ಆಸನ’ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದರು.

ಈ ಸಂದರ್ಭ ಮಹಿಳಾ ಮುಖಂಡರಾದ ಭಾಗ್ಯ ರೂಪ, ಮಂಜುಳಾ, ಉಮಾ, ಸರಸ್ವತಿ, ಲಕ್ಷ್ಮಿದೇವಿ, ಪುಷ್ಪಾ, ಶಾಂತಿ, ಲತಾ, ಜ್ಯೋತಿ, ಜಯಸಿಂಹ ಶ್ರೀಧರ್, ಅಜಯ್ ಶಾಸ್ತ್ರಿ,  ವಿನಯ್ ಕಣಗಾಲ್, ಸಂದೇಶ್, ರಂಗನಾಥ್  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: