ಮೈಸೂರು

ಕ್ಯಾನ್ಸರ್ ಜಾಗೃತಿ : ಮಾ.11ರಂದು ಮ್ಯಾರಥಾನ್ ಮತ್ತು ವಾಕ್ ಥಾನ್

ಮೈಸೂರು, ಮಾ.8 : ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಹಾಗೂ ರೋಟರಿ ಮೈಸೂರು ವತಿಯಿಂದ ಜೆಎಲ್‌ಬಿ ರಸ್ತೆ ಬಳಿಯ ರೋಟರಿ ಶಾಲೆಯಲ್ಲಿ ಮಾರ್ಚ್‌ 11ರಂದು ಬೆಳಿಗ್ಗೆ 8ಕ್ಕೆ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಮ್ಯಾರಥಾನ್‌ ಮತ್ತು ವಾಕ್‌ಥಾನ್‌ ಆಯೋಜಿಸಲಾಗಿದೆ ಎಂದು ಅಕ್ಕ ಅಧ್ಯಕ್ಷ ಶಿವಮೂರ್ತಿ ಕೀಲಾರ ಹೇಳಿದರು.

‘ಅಕ್ಕ’ ಸಂಸ್ಥೆಯು ಲಾಭ ನಿರೀಕ್ಷಣಾ ರಹಿತ ಶೈಕ್ಷಣಿಕ, ಸಾಮಾಜಿಕ, ಭಾಷಾ, ಸೇವಾ, ಸಾಂಸ್ಕೃತಿಕ ಸಂಘಟನೆಯ ಸಂಸ್ಥೆಯಾಗಿದೆ. ದಕ್ಷಿಣಾ ಅಮೆರಿಕಾದಲ್ಲಿ ವಾಸವಾಗಿರುವ ಕನ್ನಡಿಗರು, ಕನ್ನಡ ಭಾಷೆ, ಸಾಂಸ್ಕೃತಿಕ ಕಾರ್ಯಗಳ ಅಭಿವೃದ್ಧಿಗಾಗಿ ಸ್ಥಾಪನೆಗೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯ ವಿವಿಧ ಕಡೆ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ನಗರದಲ್ಲೂ ಮ್ಯಾರಥಾನ್ ಏರ್ಪಡಿಸಲಾಗಿದೆ. 600 ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಮೆಮೋಗ್ರಫಿ ಚಿಕಿತ್ಸೆ ನೀಡುವ 2 ವಾಹನಗಳನ್ನು ರಾಜ್ಯಕ್ಕೆ ನೀಡಲಾಗುವುದು. ವಾಹನಗಳು ರಾಜ್ಯದ ಹಳ್ಳಿಗಳಿಗೆ ಸಂಚರಿಸಿ ಕ್ಯಾನ್ಸರ್ ಉಚಿತ ತಪಾಸಣೆ ನಡೆಸಿ, ಕಾಯಿಲೆ ಇದ್ದವರಿಗೆ ಸಲಹೆ ನೀಡಲಾಗುವುದು. ಮ್ಯಾರಥಾನ್ ಸಂದರ್ಭದಲ್ಲಿ ವಾಹನದ ಬಗ್ಗೆ ಮಾಹಿತಿ ನೀಡಲಾಗುವುದು. ಆಸಕ್ತರು ದೂ: 0821– 4247823 ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದರು.

ರೋಟರಿ ಮೈಸೂರು ಖಜಾಂಚಿ ವೆಂಕಟೇಶ್, ಸಾನ್ವಿ ಟೆಕ್ನಾಲಜಿ ಸಂಸ್ಥೆ ಅಧ್ಯಕ್ಷ ಯಶಸ್ವಿ ಶಂಕರ್, ಕ್ಯಾನ್ಸರ್‌ ಗುಣಮುಕ್ತರಾದ ರೂಪಾ ವೆಂಕಟೇಶ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: