ಮೈಸೂರು

ಮಾನಸಧಾರ: ಯುಗಳ ನೃತ್ಯ ಸ್ಪರ್ಧೆ

ಮೈಸೂರಿನ ಜೆ.ಪಿ. ನಗರದ ಜೆ.ಎಸ್.ಎಸ್. ಪಬ್ಲಿಕ್ ಶಾಲೆಯಲ್ಲಿ ನಡೆಯುತ್ತಿರುವ ಎರಡು ದಿನಗಳ ಮಾನಸಧಾರಾ ಸಾಂಸ್ಕೃತಿಕ ಹಬ್ಬದ ಎರಡನೇ ದಿನವಾದ  ಶುಕ್ರವಾರ ಶಾಸ್ತ್ರೀಯ ಯುಗಳ ನೃತ್ಯಸ್ಪರ್ಧೆ ನಡೆಯಿತು.

ಯುಗಳ ನೃತ್ಯ ಸ್ಪರ್ಧೆಯನ್ನು ನೃತ್ಯಾಲಯ ಟ್ರಸ್ಟ್ ನಿರ್ದೇಶಕಿ  ಡಾ.ತುಳಸಿ ರಾಮಚಂದ್ರ ಅವರು ನಟರಾಜ ಮೂರ್ತಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸಾಂಸ್ಕೃತಿಕ ಕಲೆಗಳಿಗೆ ಜೆ.ಎಸ್.ಎಸ್. ಸಂಸ್ಥೆಯು ನೀಡುತ್ತಿರುವ ಪ್ರೋತ್ಸಾಹ  ಅನನ್ಯ ಎಂದರಲ್ಲದೇ ವಿದೇಶಗಳಲ್ಲೂ ಕಲೆಗಳನ್ನು ಬೆಳೆಸುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್. ಮಹಾವಿದ್ಯಾಪೀಠದ  ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಅವರು ಮಾತನಾಡಿ ಮೈಸೂರು ಕಲೆಗಳ ಬೀಡಾಗಿದ್ದು ಮುಂದಿನ ದಿನಗಳಲ್ಲಿ ಪ್ರತಿಯೊಂದು ಬಡಾವಣೆಗಳಲ್ಲೂ ಹಾಗೂ ಶಾಲೆಗಳಲ್ಲಿ ಕಲೆಗಳನ್ನು ಪ್ರೋತ್ಸಾಹಿಸುವ ಭರವಸೆ ನೀಡಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಎಲ್ಲರನ್ನು ಶಾಲೆಯ ಪ್ರಾಂಶುಪಾಲ ಎಸ್. ಪರಮೇಶ್ವರಪ್ಪ ತುಂಬು ಹೃದಯದಿಂದ ಸ್ವಾಗತಿಸಿದರು. ಶಾಲೆಯ ಶಿಕ್ಷಕಿಯಾದ  ಶಶಿಕಲಾ ವಂದನೆ ಸಲ್ಲಿಸಿದರು. ಕಾರ್ಯಕ್ರಮವನ್ನು ವಿದೂಷಿ ಶ್ರೀಲಕ್ಷ್ಮೀಕುಮಾರ್ ನಿರೂಪಿಸಿದರು.

Leave a Reply

comments

Related Articles

error: